Previous Year Question Paper

QP-CSM-26-010926-Lit-KANNADA-PAPER II

Pages4
FormatPDF
SourceOCR transcription

Please verify you're human to unlock the download & viewer links.

Full Text Transcript

Text below was recognized via OCR from scanned pages and may contain minor errors.

Civil Services (Main) Examination, 2026 ക न ୧ ಕನ್ನಡ/ KANNADA ಪತ್ರಿಕೆ 11 / Paper [1 (ಸಾಹಿತ್ಯ) / ( LITERATURE ) ವೇಳೆ: ಮೂರು ಗಂಟೆ ಗರಿಷ್ಠ ಅಂಕಗಳು : 250 Time Allowed : Three Hours Maximum Marks : 250 ಪ್ರಶ್ನೆಪತ್ರಿಕೆ ವಿಶೇಷ ಸೂಚನೆಗಳು ದಯವಿಟ್ಟು ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಕೆಳಗಿನ ಪ್ರತಿಯೊಂದು ಸೂಚನೆಗಳನ್ನುಸರಿಯಾಗಿ ಓದಿರಿ : ಇದರಲ್ಲಿಎಂಟು ಪಶ್ಚೆಗಳಿದ್ದು ಎರಡು ಭಾಗಗಳಲ್ಲಿವಿಂಗಡಿಸಲಾಗಿದೆ. ಅಭ್ಯರ್ಥಿಗಳು ಎಲ್ಲಾ ಪಶ್ಚೆಗಳಲ್ಲಿ ಐದು ಪಶ್ಚೆಗಳಿಗೆ ಉತ್ತರಿಸಬೇಕು. ಅಭ್ಯರ್ಥಿಗಳು ಪಶ್ಚೆಗಳ ಸಂಖ್ಯೆ 1 ಮತ್ತು ಠಕ್ಕೆ ಉತ್ತರಿಸುವುದು ಕಡ್ಡಾಯ, ಮತ್ತು ಇನ್ನುಳಿದ ಮೂರು ಪಶ್ಚೆಗಳಲ್ಲಿ ಪ್ರತಿಯೊಂದು ವಿಭಾಗದಿಂದ ಕನಿಷ್ಠ ಒಂದು ಪ್ರಶ್ನೆಗಾದರೂ ಉತ್ತರಿಸಬೇಕು. ಪ್ರತಿಯೊಂದು ಪ್ರಶ್ನ/ಭಾಗವು ಅಂಕಗಳನ್ಸು ಆಯಾ ಪ್ರಶ್ನೆಗಳ ಮುಂದೆಯೇ ನಮೂದಿಸಲಾಗಿದೆ. ಉತ್ತರಗಳನ್ನು ಅತ್ಯಗತ್ಯವಾಗಿ ಕನ್ನಡದಲ್ಲೇ ( ಕನ್ನಡ ಲಿಪಿಯಲ್ಲೇ) ಬರೆಯಬೇಕು. ಕೆಲವು ಪಶ್ಚೆಗಳಿಗೆ ಉತ್ತರಿಸಲು ನಿರ್ದಿಷ್ಟಪಡಿಸಿದ ಶಬ್ದಗಳ ಮಿತಿ ಯನ್ನು ಸರಿಯಾಗಿ ಪಾಲಿಸಬೇಕು. ಉತ್ತರಿಸಿದ ಪಶ್ನೆಗಳನ್ನು ಕ್ರಮಬದ್ಧವಾಗಿ ಪರಿಗಣಿಸಿ ಎಣಿಕೆ ಮಾಡಲಾಗುವುದು. ಅಪೂರ್ಣ ಉತ್ತರಗಳನ್ನು ಹೊಡೆದು ಹಾಕದಿದ್ದಲ್ಲಿ ಅವುಗಳನ್ನು ಎಣಿಕೆಯಲ್ಲಿ ಪರಿಗಣಿಸಲಾಗುತ್ತದೆ. ಪ್ರಶ್ನೋತ್ತರ ಸಹಿತವಾಗಿರುವ ಪುಸ್ತಿಕೆಯಲ್ಲಿ ಬರೆಯದೆ ಉಳಿದ ಪೂರ್ಣ ಖಾಲಿ ಪುಟಗಳನ್ನು ಮತ್ತು ಭಾಗಶಃ ಖಾಲಿ ಇರುವ ಪುಟಗಳ! २ ಸ್ಪಷ್ಟವಾಗಿ ಹೊಡೆದು ಹಾಕಬೇಕು. Question Paper Specific Instructions Please read each of the following instructions carefully before attempting questions : There are EIGHT questions divided in TWO SECTIONS. Candidate has to attempt FIVE questions in all. Questions no. 1 and 5 are compulsory and out of the remaining, any THREE are to be attempted choosing at least ONE question from each section. The number of marks carried by a question /part is indicated against it. Answers must be written in KANNADA (Kannada script). Word limit in questions, wherever specified, should be adhered to. Attempts of questions shall be counted in sequential order. Unless struck off, attempt of a question shall be counted even if attempted partly. Any page or portion of the page left blank in the Question-cum-Answer Booklet must be clearly struck off. KVMS-D-KND 7 SECTION A ৫1. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) 10x5=50 (੩) ಮೊರೆಯ ಪರಿಗಳ್‌ ಭೋರೆಂದೋರಂತೆ ಮಂಗಳ ಗೀತಿಗಳ್‌ ನೆರೆಯೆ ಗಣಿಕಾನೀಕಂ ಬಂದಾಡೆ ಪುಣ್ಯಜಲಂಗಳಿಂ ತರಿಸಿ ಮಿಸಿಸುತ್ತಾಗಳ್‌ ತಾಂ ತನ್ನ ಕೈಯ್ಯೊಳೆ ಕಟ್ಟಿದಂ ಕುರುಪರಿವೃಢಂ ಕರ್ಣಂಗಾ ವೀರಪಟ್ಟದ ಪಟ್ಟಮಂ 10 () ಉಟ್ಟುದ ತೊರೆದವಂಗೆ ಊರೇನು, ಕಾಡೇನು ? ನಷ್ಟಸಂತಾನಕ್ಕೆ ಕುಲವೇನು, ಫಲವೇನು ? ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು ? ಅದು ಕೆಟ್ಟದು, ಅದು ಕೆಟ್ಟದು ನಿನ್ನ ನೀನರಿಯದೆ ದಿಟ್ಟ ಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣ ತಂದೆ ! 10 (૭ . ಸತ್ಯಧರ್ಮಗಳ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ ತತ್ವದ ಅರ್ಥವ ವಿಚಿತ್ರದಿ ಪೇಳೆ ಕತ್ತೆಯ ಚಿತ್ತಕೆ ಹತ್ತೀತೆ ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣೆಸಿ ಮುತ್ತು ಕೊಟ್ಟರೆ ಮಾತನಾಡೀತೆ ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ಥಿಯ ತೋರದೆ ಇದ್ದೀತೆ 10 (१) ಸರಳ ಕೊರತೆಯೊ ಸಾರಥಿಯ ಮ ತ್ಸರವೊ ರಥದ ವಿಘಾತಿಯೋ ದು ರ್ಧರ ಧನುರ್ಭಂಗವೊ ಮಹಾಸ್ತ್ರ ವ್ಯಥೆಯೊ ರವಿಸುತನ ಹುರುಳು ಗೆಡಿಸಿದರೆಂತು ರಿಪುರಾ ಯರಿಗೆ ನಾವ್‌ ಗೋಚರವೆ ದುರಿತೋ ತ್ಮರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ 10 KVMS-D-KND 2 ९2. ९३. ९4. (6) ಕೊಡದ ಸಾಲಂದದ ಮುಗಿಲ ಕಾಮನಬಿಲ್ಲು ಬಡಿಗೆಯಿಂ ಬಡಿಯೆ ದೈವಗಳು ಒಡೆದಂತೆ ಗುಡುಗಾದುದೊಳಗಿದ್ದ ನೀರು ತೊ ಟ್ವಿಡುವಂತೆ ಕರೆದುದು ವೃಷ್ಟಿ ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (೩) (b) (c) ಪಂಪ ಕವಿಯ ಕರ್ಣನ ಪಾತ್ರದ ಮೂಲಕ ವೀರಯುಗದ ಶೌರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಹೇಗೆ ಪ್ರತಿಪಾದಿಸಿದ್ದಾನೆ ವಿಶ್ಲೇಷಿಸಿ. ವಿದ್ಯುಚ್ಛೋರನೆಂಬ ರಿಸಿಯ ಕಳ್ಳತನದ ತಂತ್ರಗಳು ಮತ್ತು ಪರಿಣಾಮಗಳನ್ನು ಸಮಕಾಲೀನ ನೆಲೆಯಲ್ಲಿ ವಿವೇಚಿಸಿ. ಅಕ್ಕಮಹಾದೇವಿಯ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಕೆಯ ವಚನಗಳ ಮೂಲಕ ವಿವರಿಸಿ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (೩) (b) (c) ಕುಮಾರವ್ಯಾಸ ಭಾರತದ ಕರ್ಣ ಮತ್ತು ಅರ್ಜುನರ ಯುದ್ಧ ಪ್ರಸಂಗದಲ್ಲಿ ಕಂಡು ಬರುವ ಯುದ್ಧ ನೀತಿಯ ಬಗ್ಗೆ ಬರೆಯಿರಿ. “ಮಾಡಿ తెల్లం ಪೂಜೆಯಾಗಿ, ಆಡಿ ತೆಲ್ಲಂ ಸ್ತುತಿಯಾಗಿ” - ಎಂಬ ಮಾತು ನಂಬಿಯಣ್ಣನ ಜೀವನದಲ್ಲಿ ಉಂಟುಮಾಡಿದ ಪರಿಣಾಮಗಳನ್ನು ವಿವರಿಸಿ. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆ. ಹೇಗೆ ಬಿಂಬಿತವಾಗಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿಮರ್ಶಿಸಿ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) (b) (c) ಭರತ-ಬಾಹುಬಲಿ ಯುದ್ಧದ ಪ್ರಸಂಗದಲ್ಲಿನ ಬದಲಾವಣೆ ಕುರಿತು ಕವಿ ರತ್ನಾಕರವರ್ಣಿ ಪ್ರಕಟಿಸಿರುವ ಔಚಿತ್ಯವನ್ನು ವಿವರಿಸಿ. ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಸಾಮಾಜಿಕ ಸುಧಾರಣೆಯ ಸ್ವರೂಪವನ್ನು ੦੦੯੦੦. ಕನಕದಾಸರ ಕೀರ್ತನೆಗಳಲ್ಲಿ ಬಿಂಬಿತವಾಗಿರುವ ಭಾವಗಳನ್ನು, ನೋವುಗಳನ್ನು ವಿವರಿಸಿ. KVMS-D-KND 3 10 20 20 10 20 20 10 20 20 10 SECTION B ౧5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) 10x5=50 (a) AB SSA, ನಾಟಕದಲ್ಲಿನ ಶಂಬೂಕನ ಪಾತ್ರ 00) ಪಿ. ಲಂಕೇಶರ "ನಿವೃತ್ತರು' ಕಥೆಯಲ್ಲಿವೃದ್ಧರ ನಿಜ ಸ್ವರೂಪ () ` "ಕೊಣವೇಗೌಡ' ಕಥೆನ ಗೀತೆ (૧) ವಿಲಿಯಂ തായ്‌ ಮತ್ತು ಜಾನಪದ (€) ಒಗಟುಗಳ ವರ್ಗೀಕರಣ ૦6. 8988 ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (৪) ಸಿದ್ದಲಿಂಗಯ್ಯನವರ ಕವಿತೆಗಳಲ್ಲಿ ಜನಪರ ಆಶಯಗಳನ್ನು ಗುರುತಿಸಿ. 0১) ನವ್ಯಕಥೆಗಳ ವಸ್ತು ಮತ್ತು ಭಾಷೆಯ ಲಕ್ಷಣಗಳನ್ನು ವಿವರಿಸಿ. (০) “ಮಾಧವಿಯು ಪುರುಷ ಶೋಷಣೆಯನ್ನು ಪ್ರತಿಭಟಿಸುವ ಆಧುನಿಕ ಮಹಿಳೆ” - ಈ ಹೇಳಿಕೆಯನ್ನು ಪರಾಮರ್ಶಿಸಿ. ૦7. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) “ಬೀದಿಮಕ್ಕಳು ಬೆಳದೊ” ಪುಸ್ತಕದ ಹಿನ್ನೆಲೆಯಲ್ಲಿ ಸಮುದಾಯಗಳ ಅನುಭವದ ಅಂತಃಸತ್ವವನ್ನು ಬಿಂಬಿಸುವಲ್ಲಿ ಗಾದೆಗಳ ಮಹತ್ವವನ್ನು ವಿವರಿಸಿ. 0) ಜಮೀನ್ದಾರಿ ಮತ್ತು ಆಡಳಿತಶಾಹಿ ವ್ಯವಸ್ಥೆಯ ದಲಿತ ಶೋಷಣೆಯ ಮುಖಗಳು "ಒಡಲಾಳ' ಕಾದಂಬರಿಯಲ್ಲಿ ಹೇಗೆ ಚಿತ್ರಿತವಾಗಿವೆ. (૭ "ತೊಘಲಖ್‌' ನಾಟಕದ ಮಲತಾಯಿಯ ಪಾತ್ರದ ಮಹತ್ವವನ್ನು ಪರಿಚಯಿಸಿ. ૦8. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) ದೇವರ ನಂಬಿಕೆಯ ಬಗ್ಗೆ ನಾಸ್ತಿಕರು = ಆಸ್ತಿಕರು ಇವರಲ್ಲಿರುವ ಚರ್ಚೆ ಹಾಗೂ ವಾಗ್ವಾದಗಳನ್ನು ವಿಶ್ಲೇಷಿಸಿ. (b) “ಕನ್ನಡ ಜನಪದ ಕಥೆಗಳ ಎಲ್ಲಾ ವರ್ಗದ ಕಥೆಗಳಿಗೂ "ಕನ್ನಡ ಜನಪದ ಕಥೆಗಳು' ಸಂಗ್ರಹ ಒಂದು ಉತ್ತಮ ಮಾದರಿಯಾಗಿದೆ” - ಈ ಹೇಳಿಕೆಯನ್ನು ವಿಮರ್ಶಿಸಿ. (c) “ಬೆಟ್ಟ ದ ses’ ಕಾದಂಬರಿಯಲ್ಲಿ ಗೋಪಾಲಯ್ಯ ಭೂಮಿ ಮತ್ತು ನಿಸರ್ಗದೊಡನೆ ನಡೆಸುವ ಹೋರಾಟವನ್ನು ವಿವರಿಸಿ. KVMS-D-KND 4 10 10 10 10 10 20 20 10 20 20 20 20 10