← Back to UPSC Previous Year Papers

Previous Year Question Paper

QP-CSM-26-010926-Compulsory-KANNADA

Pages10
FormatPDF
SourceOCR transcription

Please verify you're human to unlock the download & viewer links.

Full Text Transcript

Text below was recognized via OCR from scanned pages and may contain minor errors.

Civil Services (Main) KVMS-C-KND Examination, 2026 ಕನ್ನಡ / KANNADA (ಕಡ್ಡಾಯ ಪತ್ರಿಕೆ) / (Compulsory) ವೇಳೆ: ಮೂರು ಗಂಟೆ ಗರಿಷ್ಠ ಅಂಕಗಳು: 800 Time Allowed : Three Hours Maximum Marks : 300 ಪ್ರಶ್ನೆ ಪತ್ರಿಕೆ ನಿರ್ದಿಷ್ಟ ಸೂಚನೆಗಳು ಪ್ರಶ್ನೆಗಳನ್ನು ಉತ್ತರಿಸುವ ಮುನ್ನಕೆಳಗಿನ ಪ್ರತಿಯೊಂದು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿರಿ : ಎಲ್ಲಾ ಪಶ್ಚೆಗಳನ್ನೂ ಉತ್ತರಿಸಬೇಕು. ಪಶ್ನೆ/ಪಶ್ನೆಯ ಭಾಗಗಳಿಗೆ ಅನ್ವಯವಾಗುವ ಅಂಕಗಳನ್ನು ಅವುಗಳ ಎದುರಿಗೆ ಕೊಡಲಾಗಿದೆ. ಉತ್ತರಗಳನ್ನು BIO, ಸೂಚಿಸದ ಹೊರತು, ಕನ್ನಡದಲ್ಲೇ (ಕನ್ನಡ ಲಿಪಿಯಲ್ಲೇ) ಬರೆಯಬೇಕು. ಎಲ್ಲೆಲ್ಲಿ ಪ್ರಶ್ನೆಗಳಲ್ಲಿ ಪದಗಳ ಮಿತಿಯನ್ನು ಸೂಚಿಸಲಾಗಿದೆಯೋ ಆ ಸೂಚನೆಯನ್ನು ಪಾಲಿಸಬೇಕು. ಪದಗಳ ಮಿತಿ ಸೂಚಿಸಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆಯಾದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು. ಯಾವುದಾದರೂ ಪುಟ ಅಥವಾ ಪುಟದ ಭಾಗವನ್ನು ಪಶ್ನೆ ಸಹಿತವಾದ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟಲ್ಲಿ ಆ ಜಾಗವನ್ನು ಸ್ಪಷ್ಟವಾಗಿ ಪೆನ್ನಿನಿಂದ ಹೊಡೆದು ಹಾಕಬೇಕು. Question Paper Specific Instructions Please read each of the following instructions carefully before attempting questions : All questions are to be attempted. The number of marks carried by a question/part is indicated against it. Answers must be written in KANNADA (Kannada script) unless otherwise directed in the question. Word limit in questions, wherever specified, should be adhered to and if answered in much longer or shorter than the prescribed length, marks may be deducted. Any page or portion of the page left blank in the Question-cum-Answer Booklet must be clearly struck off. KVMS-C-KND 1 Ql. Q2. ಕೆಳಕಂಡ ಯಾವುದಾದರೂ ಒಂದು ವಿಷಯದ wri 600 ಪದಗಳ ಮಿತಿಯೊಳಗೆ ಪ್ರಬಂಧ ಬರೆಯಿರಿ : (੩) ಭಾರತೀಯತೆ ಮತ್ತು ನಮ್ಮ ಭವಿಷ್ಯ (b) ಡಿಜಿಟಲ್‌ ಯುಗದಲ್ಲಿ ನಾಗರಿಕರ ಕರ್ತವ್ಯ (c) ಭಾರತೀಯ ಅಂತರಿಕ್ಷ ಸಂಶೋಧನೆ ಮತ್ತು ಮಂಗಳಯಾನ (4) ಆರೋಗ್ಯ ಸೇವೆಯಲ್ಲಿ ಲಭ್ಯತೆ ಮತ್ತು ಗುಹಾತ್ಮಕತೆ ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಎಚ್ಚರಿಕೆಯಿಂದ ಓದಿ ಕೇಳಿರುವ ಪ್ರಶ್ನೆಗಳಿಗೆ ನೇರ, ಸರಳ, ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಉತ್ತರಿಸಿ : 125260 ದುಃಖದ ಸ್ಥಾನದಲ್ಲಿ ಭಯವು ಆವರಿಸುತ್ತದೆ. ಹಾಗೆಯೇ ಆನಂದದ ಸ್ಥಾನದಲ್ಲಿ ಉತ್ಸಾಹವಿರುತ್ತದೆ. ನೋವು ಮತ್ತು ನಷ್ಟವನ್ನು ಸಹಿಸಿಕೊಳ್ಳಲು ಉತ್ಸಾಹಭರಿತ ಕ್ರಿಯಾಶೀಲತೆಯ ಸಂತೋಷದ ಅಗತ್ಯವಿದೆ. ಬದುಕಿನ ಕಷ್ಟ ಮತ್ತು ನಷ್ಟದ ತೀವ್ರತೆಯನ್ನು ಆಧರಿಸಿ. ಉತ್ಸಾಹಶೀಲದ ಬೇರೆ ಬೇರೆ ವಿಧಾನಗಳಿವೆ. ಸಾಹಿತ್ಯ ಮೀಮಾಂಸಕರ ಪ್ರಕಾರ ಉತ್ಸಾಹಕ್ಕೆ ಯುದ್ಧವೀರತ್ವ, ದಾನವೀರತ್ವ, ಹಾಗೂ ದಯಾವೀರತ್ವವೆಂಬ ಇತ್ಯಾದಿ ಪ್ರಭೇದಗಳಿವೆ. ಇವುಗಳಲ್ಲಿ ಪ್ರಾಚೀನವಾದ ಮತ್ತು ಪ್ರಧಾನವಾದ ಶುದ್ಧ ವೀರತ್ವವೂ ಇರುತ್ತದೆ. ಇವುಗಳಲ್ಲಿ ಆಘಾತ, ಪೀಡೆ, ಮೃತ್ಯು ಮುಂತಾದವುಗಳನ್ನು ಮೀರಿದ ಯುದ್ಧವೀರತ್ವವು ಅತ್ಯಂತ ಪ್ರಾಚೀನವಾದುದು. ಇದರಲ್ಲಿ ಸಾವು ನೋವುಗಳು ಗಂಭೀರವಾದ ಯಾತನೆಗಳು ಯಾವ ಗಣನೆಗೆ ಬರುವುದಿಲ್ಲ. ಪ್ರಾಚೀನ ಕಾಲದಿಂದ ಈ ರೀತಿಯ ವೀರತ್ವದ ಅಭ್ಯಾಸ ಜಾರಿಯಲ್ಲಿದ್ದು ಇದರಲ್ಲಿ ಧೈರ್ಯ ಮತ್ತು ಪ್ರಯತ್ನ ಉತ್ತುಂಗ ಮಟ್ಟದಲ್ಲಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಧೈರ್ಯ ಮತ್ತು ಪರಾಕ್ರಮಕ್ಕೆ ಅನುಗುಣವಾಗಿ ಅವುಗಳ ಗುಣವಿಶೇಷಣೆಯನ್ನು ಹೇಳಲಾಗುತ್ತದೆ. ಅದರ KVMS-C-KND 2 ಉತ್ಸಾಹಶೀಲತೆಯು ಕೇವಲ ಒಂದು ಪ್ರಕಾರವಾಗಿ ಉಳಿಯಲಿಲ್ಲ. ಧೈರ್ಯವು ಎಂದಿಗೂ ನೋವು ಮತ್ತು ಮಿಡಿತಕ್ಕೆ ಒಳಗಾಗುವುದಿಲ್ಲ. ಅದು ಒಟ್ಟಾಗಿ ಆನಂದ ಮತ್ತು ಅದರ ಹುಡುಕಾಟದ ನೆಲೆಗಾಗಿ ಪ್ರಯತ್ನಿಸುತ್ತಲೇ ಇರುತ್ತದೆ. ಹೀಗಿರುವಾಗ ಆಂತರಿಕವಾಗಿ ಆಗಲಿ, ಇಲ್ಲವೇ ಬಾಹ್ಯವಾಗಿ ಆಗಲಿ ನಮ್ಮಲ್ಲಿನ ಧೈರ್ಯವು ಎಂದಿಗೂ ಕಳೆದು ಹೋಗುವುದಿಲ್ಲ. ಉತ್ಸಾಹಶೀಲತೆಯು ಹಾಗೆಯೇ ಉಳಿಯುತ್ತದೆ. ಉಳಿದವುಗಳು ಮೌನವಾಗಿ ಕೈ ಕಾಲು ಬಡಿಯದೆ, ಅಲ್ಲಾಡದೆ. ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತದೆ. ಮತ್ತು ಉಳಿದ ಯಾತನೆಗಳನ್ನು ಅದು ತನ್ನಲ್ಲಿಯೇ ಸಹಿಸಿಕೊಂಡು ಮುಂದುವರೆಯುತ್ತದೆ. ಈ ಬಗೆಯ ಧೈರ್ಯ ಮತ್ತು ಪರಿಶ್ರಮಗಳು ಉತ್ಸಾಹಶೀಲತೆಯ ಭಾಗವೆಂದೇ ಹೇಳಬಹುದು. ಯಾರು ಧೈರ್ಯಶಾಲಿಗಳಾಗಿರುತ್ತಾರೋ, ಇಲ್ಲವೆ ತಾಳ್ಮೆ ಸಹನೆಯ ಗುಣಗಳನ್ನು ಹೊಂದಿರುತ್ತಾರೋ ಅವರು. ಅದರ ಸಂತೋಷವನ್ನು ಅನುಭವಿಸುತ್ತಾರೆ. ಇವರು. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಬಗೆಯ ಉತ್ಸಾಹಶೀಲತೆಯು ಒಂದು ರೀತಿಯ ಸಂತೋಷದಾಯಕ ಶಕ್ತಿ ಎಂದೇ ಹೇಳಬಹುದು. ಅದರಲ್ಲಿರುವ ಹುಡುಕಾಟವು ದುರ್ಬಲ ಲಕ್ಷಣಗಳ ವರ್ತನೆಯಾಗಿರುವುದಿಲ್ಲ. ಅದಕ್ಕೆ ಬದಲಾಗಿ ನೋವುಗಳನ್ನು ಸಹಿಸುವ ಗುಣಗಳನ್ನು ಹೊಂದಿರುತ್ತಾರೆ. शा ತಾಳ್ಮೆ. ಮತ್ತು. ಧೈರ್ಯಗಳೆರಡೂ ಉತ್ಸಾಹಶೀಲತೆಯ ಭಾಗನೇ ಆಗಿರುತ್ತವೆ. ಈ ರೀತಿಯ ವಾತ್ಸಲ್ಯ ಮತ್ತು ಪ್ರೀತಿಯ ಧಾರೆಗಳು ಧೈರ್ಯ ಮತ್ತು ತ್ಯಾಗವನ್ನು ತೋರಿಸುವ ಸಂಪತ್ತಿನ ವಾಹಕಗಳಾಗಿರುತ್ತಾರೆ. ಈ ರೀತಿಯ ಶಕ್ತಿ ಮತ್ತು ಗುಣವಿಶೇಷತೆಯನ್ನು ಹೊಂದಿರುವವರು ಧೈರ್ಯ ಮತ್ತು ಸಹಾನುಭೂತಿಯ ಸಂಪತ್ತನ್ನು ಹೊಂದಿರುತ್ತಾರೆ. ಅವರು ನೋವು ಮತ್ತು ಎದುರಾದ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಉದಾರವಾದ ಜೀವನಮೌಲ್ಯಗಳನ್ನು ಪ್ರಸಾರ ಮಾಡುವರಾಗಿರುತ್ತಾರೆ. ದಾನಿಗಳು ತಮ್ಮ ಅನುಭವದಿಂದ ಕಷ್ಟಗಳನ್ನು ಎದುರಿಸಿ. ಜೀವನಪರ್ಯಂತ ಜನರಿಗೆ. ನೀಡುವ. ದಾನಧರ್ಮಗಳ ಮೂಲಕ ಶ್ರೇಷ್ಠತೆಯನ್ನು ಮರೆಯುತ್ತಾರೆ. ಈ ಬಗೆಯ ಜೀವನದ ಕಠಿಣತೆಯನ್ನು ಎದುರಿಸುವವರು KVMS-C-KND 3 ಶಕ್ತಿಯ ವಿಶೇಷತೆ ಮತ್ತು ತ್ಯಾಗದ ಸಂಪತ್ತನ್ನು ಮನೆಮಾಡಿಕೊಂಡಿರುತ್ತಾರೆ. ಹಾಗೆಯೇ ಅವರಲ್ಲಿ ಉದಾರವಾದ ಮೌಲ್ಯದೊಂದಿಗೆ ಹೃದಯ ವೈಶಾಲ್ಯವಿರುತ್ತದೆ. ಅವರು ತಮಗೆ ಲಭಿಸುವ ಸಂತೋಷ ಮತ್ತು ಉತ್ಸಾಹಶೀಲತೆಯನ್ನು ಎಂದಿಗೂ ಯಾವುದರಲ್ಲೂ ಸೇರಿಸಲು ಬಯಸುವುದಿಲ್ಲ. ಯುದ್ಧ ಮಾತ್ರವಲ್ಲದೇ, ಜಗತ್ತಿನಲ್ಲಿ ಇತರ ಕಷ್ಟಕರ ಕಾರ್ಯಗಳಿದ್ದು, ಅವನ್ನು ನಿರ್ವಹಿಸಲು ತೀವ್ರ ದೈಹಿಕ ಬಾಧೆಯ ಅಗತ್ಯವಿರುತ್ತದೆ, ಕೆಲವೊಮ್ಮೆ ಸಾವು ಕೂಡಾ ಸಂಭವಿಸುವ ಸಾಧ್ಯತೆಯಿದೆ. = ಹಿಮವತ್‌ ಪರ್ವತದಲ್ಲಿರುವವನು ಎಂದಿಗೂ ಅಂಜುಬುರುಕರಾಗಿರುವುದಿಲ್ಲ. ಅವರು ಮೋಡದಂತೆ ಯಾವಾಗಲೂ ಚಲನಶೀಲರಾಗಿರುತ್ತಾರೆ. ಪರ್ವತಗಳಂತೆ ದೃಢವಾಗಿರುತ್ತಾರೆ. ಸಂಶೋಧನೆ, ಪ್ರವಾಸ ಮುಂತಾದ ಯಾವುದಕ್ಕಾದರೂ ಅವರು ಹೆದರುವುದಿಲ್ಲ. ಸಹರಾ ಮರುಭೂಮಿಯ ತನಕ ತಲುಪಿ. ಯಾರೂ ಇಲ್ಲದ ದಟ್ಟ ಕಾಡುಗಳಲ್ಲಿ ಸಾಹಸದ ಬದುಕನ್ನು ನಡೆಸುವ ಶಕ್ತಿಶಾಲಿಗಳಾಗಿರುತ್ತಾರೆ. ಈ ರೀತಿಯ ಸಂತೋಷದಿಂದಲೇ ಅವರು ತಮ್ಮ ಜೀವನದಲ್ಲಿ ನಿರಂತರ ಉತ್ಸಾಹಶಾಲಿಗಳಾಗಿರುತ್ತಾರೆ. ಇವೆಲ್ಲವೂ ಈ ಮೊದಲು ವಿಧಿತಪಡಿಸಿದ ಉತ್ಸಾಹಶೀಲತೆಯ ಗುಣಲಕ್ಷಣಗಳಾಗಿವೆ. (੩) ಉತ್ಸಾಹಶೀಲತೆಯಲ್ಲಿ ಧೈರ್ಯದ ಪಾತ್ರವನ್ನು ತಿಳಿಸಿ. യ ಪರಿಶ್ರಮದ ಅರ್ಥವನ್ನು ವಿವರಿಸಿ. (૭ ಉತ್ಸಾಹಶೀಲತೆಯನ್ನು ಪಡೆಯುವ ಬಗೆ ಹೇಗೆ ? (ત) ಸಂತೋಷ ಮತ್ತು ಉತ್ಸಾಹದ ನಡುವಿನ ಅಂತರ ಸಂಬಂಧವನ್ನು ಗುರುತಿಸಿ. (૭) ಶಕ್ತಿಶಾಲಿಯಾದವನು ತ್ಯಾಗಶೀಲನೂ ಆಗಿರುತ್ತಾನೆ. ०२९९८९९. KVMS-C-KND 4 12 12 12 12 12 Q3. ಕೆಳಕಂಡ ಪಠ್ಯವನ್ನು ಅದರ ಮೂರನೆಯ ಒಂದು ಭಾಗಕ್ಕೆ ಮೀರದಂತೆ ಸಂಗ್ರಹಿಸಿ ನಿಮ್ಮದೇ ಆದ ಪದಗಳಲ್ಲಿ ಬರೆಯಿರಿ, ಅದಕ್ಕೆ ಶೀರ್ಷಿಕೆ ಕೊಡಬೇಡಿ : ಆಹ್ಲಾದಕರವಾದ ಜೀವನ ಹವ್ಯಾಸಗಳಲ್ಲಿ ಉತ್ತಮ ಕೇಳುಗನಾಗಿರುವುದು ಅತ್ಯಂತ ಮಹತ್ವದ ವಿಷಯ. ಆದರೂ ನಮ್ಮಲ್ಲಿ ಹೆಚ್ಚಿನವರಿಗೆ ಅದನ್ನು ಹೇಗೆ ಮಾಡುವುದೆಂದು ಗೊತ್ತಿಲ್ಲ. ನಾವು ಕೆಟ್ಟವರೆಂದೇನೂ ಅಲ್ಲಾ, ಬದಲಿಗೆ ನಮಗೆ ಅದನ್ನು ಯಾರೂ ಕಲಿಸಿಲ್ಲ. ಜೊತೆಗೆ ನಮ್ಮ ಮಾತನ್ನೂ ಹೆಚ್ಚಿನವರು ಸರಿಯಾಗಿ ಕೇಳಿಸಿಕೊಂಡಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಏನನ್ನು ಕೇಳಬೇಕು, ಹೇಗೆ ಕೇಳಬೇಕು ಎಂಬುದು ನಮಗೆ ತಿಳಿಸಿರುವುದಿಲ್ಲ. ಸಾಮಾಜಿಕ ಜೀವನದಲ್ಲಿ ನಮಗೆ ಮಾತಿಗಿಂತಲೂ ಹೆಚ್ಚು ಕೇಳಲು ಬಯಸುವ ದುರಾಸೆ ಆವರಿಸುತ್ತದೆ. ಇತರರನ್ನು ಭೇಟಿಯಾಗುವ ಹಸಿವಿರುತ್ತದೆ. ಆದರೆ ಅವರ ಮಾತು ಕೇಳಲು ನಿರುತ್ಸಾಹವಿರುತ್ತದೆ. = ಗೆಳತನವು ಸಾಮಾಜಿಕ ಸ್ವಾರ್ಥವಾಗಿ ಅವನತಿ ಹೊಂದುತ್ತದೆ. ಯಾರು... ಉತ್ತಮ ಕೇಳುಗರಾಗಿರುತ್ತಾರೋ ಅವರು ಅವರು ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಅವರ ಜೊತೆ ಕಾಲಕಳೆಯುವುದು ಸಂತೋಷಕರವಾಗಿರುತ್ತದೆ. ಅವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಅಂತರ್ನಿರೀಕ್ಷೆಗೆ ಮಾಡಿಕೊಳ್ಳುತ್ತಾರೆ. ಸಂಭಾಷಣೆ ಮತ್ತು ಭಾವನೆಗಳ ಹಂಚಿಕೆಯಲ್ಲಿ ನಾವು ನಮಗೆ ತಿಳಿಯಲಾರದ ಕೆಲವು ಸಂಗತಿಗಳಿಗೆ ಪಕ್ಕಾಗುತ್ತೇವೆ. ನಾವು ಯಾವುದೇ ಕೆಲಸಕ್ಕೆ ಹೆದರುವುದಿಲ್ಲ. ಆದರೆ ಮಹತ್ವಾಕಾಂಕ್ಷೆಯ ಸಂದರ್ಭಗಳಲ್ಲಿ ನಮ್ಮ ಜೀವನದ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸರಿ ತಪ್ಪುಗಳ ಇಲ್ಲವೇ ಸಾಧ್ಯ-ಅಸಾಧ್ಯತೆಗಳ ಗೋಜಿಗೆ ಹೋಗುವುದಿಲ್ಲ. ಸಂಬಂಧಗಳಲ್ಲಿ ಕಠಿಣತೆಯ ಜೀವನಕ್ಕೆ. ಬೇಕಾಗುವ ಎಲ್ಲಾ ಬಗೆಯ ಭಾವ ಪ್ರಪಂಚದಿಂದ ನಾವು ಪ್ರಭಾವಿತರಾಗುತ್ತೇವೆ. ಇಂತಹ ಸಂದರ್ಭದಲ್ಲಿ ಒಳಿತು ಕೆಡುಕುಗಳ ವಿವೇಚನೆಯನ್ನು ಹೊಂದಬೇಕಿದೆ.. ಭಾವನಾತ್ಮಕ ಮತ್ತು ಸ್ಫೂರ್ತಿದಾಯಕವಾಗಿಯೂ ನಮ್ಮಲ್ಲಿನ ಭಾವನೆಗಳನ್ನು ನಾವು ನಿರಸನಗೊಳಿಸಬೇಕಾಗುತ್ತದೆ. ಕೆಲವೊಮ್ಮೆ ಹೃದಯ ಪೂರ್ವಕವಾಗಿ ಹೇಳುವುದಾದರೆ ಇವುಗಳೆಲ್ಲವೂ ಬೇರೆ ಬೇರೆ ವಿಚಾರಗಳ ಶೋಧ ಅಥವಾ ಅವುಗಳ ಸ್ಪಷ್ಟೀಕರಣ ಅಗತ್ಯವಾಗಿರುತ್ತದೆ. ಒಳ್ಳೆಯ ಕೇಳುಗನು ಯಾವಾಗಲೂ, ಸಂಭಾಷಣೆ ಮಾಡುವಾಗಲೂ-ಇತರರ ಬಗ್ಗೆ ಯಾವುದೇ KVMS-C-KND 5 60 ಸಂಶಯ ಪಡದೆ; ಅವರ ವಿರುದ್ಧ ತನ್ನ ಮನಸ್ಸಿನಲ್ಲಿ ಕಹಿ ಭಾವನೆಗಳನ್ನು ಹೊಂದದೆ ಆಶಾದಾಯಕವಾಗಿರುತ್ತಾನೆ. ಜೊತೆಗೂಡಿ ಸಾಗಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ. ಈ ಬಗೆಯ ಕಾರ್ಯಗಳು ಅವನಿಗೆ ನಿರ್ದಿಷ್ಟವಾದ ದಾರಿಯನ್ನು ತೋರಿಸುತ್ತವೆ. ವಾಸ್ತವವಾಗಿ ಇದು ಹೀಗೆಯೇ ಸಂಭವಿಸುತ್ತದೆಂದು ನಾವು ಹೇಳಲಾರೆವು. = ನಮ್ಮಲ್ಲಿನ. ಆಸೆಗಳನ್ನು. ನಿಯಂತ್ರಿಸುವ ಪ್ರತ್ಯುತ್ಪನ್ನಮತಿತ್ತ್ವ ಸಂಭಾಷಣೆಯ ನೈಜತೆಯನ್ನು ಸ್ಪಷ್ಟೀಕರಣಗೊಳಿಸಲು ಅವನು ಯಾವಾಗಲೂ ತನ್ನ ಮನಸ್ಸನ್ನು ಮುಕ್ತವಾಗಿರಿಸಿರುತ್ತಾನೆ. ಬಹಳಷ್ಟು ಜನ ಉತ್ತಮ ಕೇಳುಗರಾ ರಾಗಿರುವುದಿಲ್ಲ. ಆದರೆ. ಕೆಲವು. ಕೇಳುಗರು ತಾವು ಕೇಳಿದ್ದನ್ನು ಬೇರೆಯವರಿಗೆ ವಿವರಿಸಲು. ಅಸಮರ್ಥರಾಗಿರುತ್ತಾರೆ, wad ತಾವು ಹೇಳಿದ ನಿಜವನ್ನು ಸಾಧಿಸುವವರಾಗಿರುತ್ತಾರೆ. ಕೆಲವರು ಸತ್ಯವನ್ನು ಮುಚ್ಚಿಡಲು ಬಯಸುತ್ತಾರೆ. ಇನ್ನೂ ಕೆಲವರು ಸಂತೋಷದ ಕ್ಷಣಗಳಲ್ಲಿ ದುಃಖ ಮತ್ತು ಭಾವುಕತೆಯು ಪರವಶತೆಯನ್ನು ತೋರಿಸುತ್ತಾರೆ. ಆದರೆ ಕೇಳುಗರು ಅದರಿಂದ ಭಾವಪರವಶರಾಗುವುದಿಲ್ಲ. ಇವುಗಳನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಶೋಧಿಸುತ್ತಲೇ ಈ ಎಲ್ಲವನ್ನು ಹೇಳಬೇಕಾಗುತ್ತದೆ. ಒಳ್ಳೆಯ ಕೇಳುಗರು ಇದಕ್ಕಾಗಿ ಜಗಳವಾಡುತ್ತಾರೆ. ಇದು ಅವರ ಸಂವಾದಿಸುವ ತಂತ್ರವೂ ಆಗಿರುತ್ತದೆ. ಕೆಲವರು ತಮ್ಮ ವ್ಯಕ್ತಿತ್ವವನ್ನು ತಮ್ಮ ಅಭಿವ್ಯಕ್ತಿಯ ಮೂಲಕ ವ್ಯಕ್ತಪಡಿಸುತ್ತಾರೆ. ಅವರು ನಮಗೆ ಸ್ಫೂರ್ತಿದಾಯಕವಾಗುವಂತೆ ಮಾಡುತ್ತಾರೆ. ನಮ್ಮ ಚಟುವಟಿಕೆಗೆ ಅವರ ಬೆಂಬಲ ಯಾವಾಗಲೂ ಬೇಕಾಗುತ್ತದೆ. ಅವರ ಉತ್ತಮ ವ್ಯಕ್ತಿತ್ವದಿಂದ ಸಕಾರಾತ್ಮಕ ಗುಣಗಳನ್ನು ನಮ್ಮಲ್ಲಿ ಹೆಚ್ಚಿಸುತ್ತ ಹೋಗುತ್ತಾರೆ. ನಮ್ಮ ದುಃಖದ ಸಂದರ್ಭದಲ್ಲಿ ನಮಗೆ ಸಹಾನುಭೂತಿ ತೋರಿಸಿ ನಮ್ಮನ್ನು ಮತ್ತೆ ಹುರುಪುಗೊಳಿಸಿ ನಾವು ಮತ್ತೆ ಶಕ್ತಿವಂತರಾಗುವಂತೆ ಮಾಡುತ್ತಾರೆ. ಎಲ್ಲಾ ಸಂದರ್ಭಗಳಲ್ಲಿಯೂ ಅವರು ಆಳವಾಗಿ ಯೋಚಿಸಿ ನಾವು ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತಾರೆ. ಅವರು ನಮ್ಮನ್ನು ಪ್ರೀತಿಸುತ್ತಾ ಹೇಳುತ್ತಾರೆ “ಇನ್ನಷ್ಟು ವಿಸ್ತರಿಸಿ ಹೇಳು”, “ನಾನು ನಿಮ್ಮಿಂದ ಆಕರ್ಷಿತನಾದೆ” ಅದು - ಹೀಗಾಗಲು ಕಾರಣವೇನು ನಿನಗೆ ಏನು ಅನ್ನಿಸುತ್ತಿದೆ... ಹೀಗೆ ಉತ್ತಮ ಕೇಳುಗರು ನಮಗೆ ನಮ್ಮ ಮುಂದೆ ಬಂದಿರುವ ಸಮಸ್ಯೆಗಳನ್ನು ಬಿಡಿಸಿ KVMS-C-KND 6 ಎದುರಿಸುವ ಶಕ್ತಿಯನ್ನು ಬಲಗೊಳಿಸುತ್ತಾರೆ. ಆದರೆ; ಅವರೆಂದೂ ನಮ್ಮನ್ನು ನಿಂದಿಸುವುದಿಲ್ಲ. ನಿರಾಶರಾಗಿಸುವುದಿಲ್ಲ. ಅಧೀರಗೊಳಿಸುವುದಿಲ್ಲ. ಯಾಕೆಂದರೆ; ವಿಶ್ವಾತ್ಮಾಕವಾದ ಭಾವನೆಗಳನ್ನು ಅವರು ನಮ್ಮ ಮನಸ್ಸಿನಲ್ಲಿ ನೆಲೆಗೊಳಿಸುತ್ತಾರೆ. ನಿಜವಾದ ಸ್ನೇಹಿತರು ಯಾವಾಗಲೂ ನಮಗೆ ಸಹಾಯ ಮಾಡುವವರೇ ಆಗಿರುತ್ತಾರೆ. ನಾವು ಯಾವ ಸಂದರ್ಭದಲ್ಲಿಯೇ ಆಗಲಿ ನಮ್ಮ ಶಕ್ತಿ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಸಹವಾಸವನ್ನು ಮಾಡಬೇಕಾಗುತ್ತದೆ. ಉತ್ತಮ ಕೇಳುಗನು. ಅನೇಕ ಲಾಭಗಳನ್ನು ಪಡೆಯುತ್ತಾನೆ... ಅವನು ಬೇರೆಯವರಿಂದ ಸ್ಫೂರ್ತಿಪಡೆಯುತ್ತಾನೆ. ವಿವರವಾದ ಮಹತ್ವದ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಕೇಳಿದ ಸಂಗತಿಗಳಿಂದ ಪ್ರೇರಣೆ... ಪಡೆದು ಮುನ್ನಡೆಯುತ್ತಾನೆ. 009.708۸ ಹೇಳುವುದಾದರೆ, ಮಂತ್ರವಾಕ್ಯಗಳಂತೆ ನಾವು ಆ ಸಂದೇಶಗಳಿಂದ ಪ್ರೇರಿತರಾಗುತ್ತೇವೆ. ಮತ್ತಷ್ಟು ಹೊಸ ವಿಷಯಗಳನ್ನು ಕಲಿಯುತ್ತೇವೆ. ಬಾಲಕರಾಗಿದ್ದಾಗ ୭୭୭୭ ಸಂಬಂಧಗಳನ್ನು ಹೆಣೆಯುವುದು. ಹೀಗೆಯೇ ಅಲ್ಲವೇ? ಇಷ್ಟೆಲ್ಲಾ ಬದಲಾವಣೆ ಹೇಗೆ. ತಾನೇ ಸಾಧ್ಯವಾಯಿತು. ಅವರಿಗೂ ನಮ್ಮ ಹಾಗೆ ಕೇಳುವ ಉತ್ಸಹವಿದೆ. ಅವರು ನಮಗೆ ಹೀಗೆ ಕೇಳಬಹುದು. ನೀನು ಯಾಕೆ ತನ್ನ ಮಾತಿನಂತೆ - ನಡೆಯಲಿಲ್ಲ. ಇದು ನಿನಗೆ ಮಹತ್ವದ ವಿಷಯವೆಂದು ತಿಳಿಯಲಿಲ್ಲವೆ ? ಅವರು ನಮ್ಮ ಎಲ್ಲಾ ಚರಿತ್ರೆಯನ್ನು ತಮ್ಮ ಮನಸ್ಸಿನಲ್ಲಿರಿಸುತ್ತಾರೆ. ୪୦ ಸಂದರ್ಭದಲ್ಲಿ ಅವುಗಳನ್ನು ಪುನ:ರುಚ್ಚರಿಸುತ್ತಾರೆ. ಒಟ್ಟಿನಲ್ಲಿ ಅವರು ನಮ್ಮ ನಡುವೆ ಸೇತುವೆಯಾಗಿ ಆಳವಾದ ಜೀವನ ಶ್ರದ್ಧೆಯನ್ನು ಬೆಳೆಸಿ ನಾವು ಸದಾ ಕ್ರಿಯಾಶೀಲರಾಗುವಂತೆ ಮಾಡುತ್ತಾರೆ. ಕೊನೆಯದಾಗಿ ಈ ಅಸ್ಪಷ್ಟ ವಿಷಯದ ಬಗೆಗೆ ಸುಲಭವಾಗಿ ಹೇಳಬಹುದು. ನಾವು ಸರಳವಾಗಿ ಹೇಳುವುದಾದರೆ అదు ಅತ್ಯಂತ ಸುಂದರ, ಇಲ್ಲವೇ ಭಯಾನಕ, ಸಂತೋಷದಾಯಕ ಇಲ್ಲವೇ ಕಿರಿಕಿರಿಯನ್ನುಂಟು ಮಾಡುವ ವಿಷಯ. ಆದರೆ, ನಾವು ನಿಜವಾಗಿ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಉತ್ತಮ ಕೇಳುಗ ಒಬ್ಬ ಒಳ್ಳೆಯ ಉತ್ಪಾದಕ. ಸ್ನೇಹಮಯ ಅನುಮಾನಗಾರ. ನಮ್ಮ ಆಳ ಪ್ರವೃತ್ತಿಯ ಮೂಲ dos ಹಿನ್ನಲೆಯವನಾಗಿರುತ್ತಾನೆ. (468 ಪದಗಳು) KVMS-C-KND 7 ౧4. ಕೆಳಗಿನ ಗದ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸಿ : ಪ್ರಾಚೀನ ಕಾಲದಿಂದಲೂ ಭಾರತೀಯ ನೌಕಾಯಾನದ ನಾವಿಕರು ಎಂದೆಂದಿಗೂ ನವೀಕರಿಸಬಹುದಾದ ನೌಕಯಾನದ ಕೌಶಲ್ಯ ತಂತ್ರಗಳನ್ನು ಹೊಂದಿದವರಾಗಿದ್ದಾರೆ. ಅವರು ಐದು ಸಾವಿರ ವರ್ಷಗಳ ಹಿಂದಿನಿಂದಲೂ ಸಮುದ್ರಯಾನವನ್ನು ಮಾಡುತ್ತಾ ಬಂದಿರುತ್ತಾರೆ. ಆಧುನಿಕ ಕಾಲದ ಸಾಧನ ಸಾಮಗ್ರಿಗಳು ಆ ಕಾಲದಲ್ಲಿರಲಿಲ್ಲ. ವೈಜ್ಞಾನಿಕ ಸಲಕರಣೆಗಲ್ಲದ ಆ ಕಾಲದಲ್ಲಿ ಸಮುದ್ರಯಾನಕ್ಕೆ ಕೆಲವೇ ಕೆಲವು ಸೀಮಿತ ಸಾಧನಗಳಿದ್ದವು. ಆದರೂ ಪ್ರಾಚೀನ ಕಾಲದ ಭಾರತೀಯ ನಾವಿಕರು ವಾತಾವರಣ ಹಾಗೂ ಪರಿಸರದ ಗುಣ ಲಕ್ಷಣಗಳನ್ನು ಸೂಕ್ಷ್ಮತೆಯಿಂದ ತಿಳಿದವರಾಗಿದ್ದರು. ಮರಗಿಡಗಳು, ಬೀಸುವ ಗಾಳಿಯ ದಿಕ್ಕು, ಹಾಗೂ ನೀರಿನ ಬಣ್ಣದಿಂದಲೇ ನೀರಿನ ಆಳವನ್ನು ಬಲ್ಲವರಾಗಿದ್ದು, ವಾತಾವರಣದ ಮುನ್ಸೂಚನೆಯನ್ನು ಗ್ರಹಿಸುತ್ತಿದ್ದರು. ಸಾಗರದ ಏರಿಳಿತವನ್ನು. ಗಮನಿಸುತ್ತಾ ಜಲಚರಗಳ ಚಲನೆಯನ್ನು ತಿಳಿಯುತ್ತಲೇ ಭೂಮಿ ಮತ್ತು ಸಮುದ್ರದ ನಡುವಿನ ಅಂತರವನ್ನು ನಿರ್ಧರಿಸುತ್ತಿದ್ದರು. ಸರಿ-ತಪ್ಪುಗಳ ಪ್ರಯತ್ನ ಮತ್ತು ಅನುಭವದ ಆಧಾರಗಳಿಂದಲೇ ದೂರ ದೂರದ ದೇಶಗಳ ಲಂಗರುಗಳನ್ನು = ಕಂಡುಹಿಡಿಯುತ್ತಿದ್ದರು. = ಇವೆಲ್ಲವೂ வி ಬದುಕಿನ ಅನುಭವದಿಂದಲೇ ಬರುತಿತ್ತು ಕಡಲಿಗೆ ಸಂಬಂಧಿಸಿದ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದೇ; ಇದೆಲ್ಲವನ್ನು ಸಾಧಿಸಿದ್ದರು. ಕೆಲವು ವೇಳೆ ಅಪಘಾತಗಳು ಸಂಭವಿಸುತ್ತಿದ್ದವು. ಅವರ ಧೈರ್ಯ ಮತ್ತು ಸ್ವ-ಸಾಮರ್ಥ್ಯವು ನಿರಂತರವಾಗಿ ಅವರಿಗೆ ಶಕ್ತಿ ಸಂಚಯನವಾಗಿ ಉತ್ಸಾಹವನ್ನು ನೀಡುವಲ್ಲಿ ಕಾರಣವಾಗುತ್ತಿತ್ತು. ಸಾಗರದ ಭಯವೇ ಅವರಿಗೆ ಒಂದು ಶಕ್ತಿಯಾಗಿತ್ತು. ಇಷ್ಟಾಗಿಯೂ ಅವರು ಪಶ್ಚಿಮದ ಪರ್ಶಿಯನ್‌ ಗಲ್ಫ್‌ನ್ನು ತಲುಪಿದ್ದರು. ಜೊತೆಗೆ ಪೂರ್ವದ ಆಫ್ರಿಕಾ ಮತ್ತು ಗುಡ್ಡಗಾಡಿನ ನಡುಗಡ್ಡೆಗಳಾದ ಇಂಡೋನೇಷಿಯಾ, ಕಾಂಬೋಡಿಯಾ, ಅನ್ನಂ, ಬೋರ್ನಿಯೊ ಮತ್ತು ಲೆಲಬಸ್‌ ಮುಂತಾದ ಪೂರ್ವ ಪಶ್ಚಿಮ ದೇಶಗಳನ್ನು ಸಂಧಿಸುತ್ತಿದ್ದರು. 1970 ರ ಪೂರ್ವದಲ್ಲಿ ಆಧುನಿಕ ಕಾಲದ ಸಾಗರಯಾನದ ಸಾಹಸಮಯವಾದ ತರಬೇತಿ ಅವರಿಗೆ ಅರಿವಿಗೆ ಬಂದಿತ್ತು. KVMS-C-KND 8 20 Q5. Q6. ಸ್ವತಂತ್ರ ಭಾರತದಲ್ಲಿ ಪ್ರಶಾಂತವಾದ ಗಾಳಿ ವ್ಯಾಪಕವಾಗಿ ಬೀಸುತ್ತಿದೆ. ಸಮುದ್ರಯಾನದ ಪರಂಪರೆಯಲ್ಲಿ ಭಾರತದ ಸೂರ್ಯ ಅತ್ಯಂತ ವೈಭವಯುತವಾಗಿ ಪ್ರಕಾಶಿಸುತ್ತಿದ್ದಾನೆ. ಇದುವರವಿಗೆ ಕೆಲವು. ಕೆಲವೇ ರಾಷ್ಟ್ರಗಳಲ್ಲಿದ್ದ ಈ ಹೊಳಪು ಭಾರತದಲ್ಲಿ ಉದಯಿಸುತ್ತಿದೆ. ಹಾಗಾಗಿ ಭಾರತೀಯ ನೌಕಾಯಾನವು ಹೊಸಕಾಲದ ಶೀರ್ಷಿಕೆಯ ಮೂಲಕ ಸರಿದಾರಿಯಲ್ಲಿ ಸಾಗುತ್ತಿದೆ. ಕೆಳಗಿನ ಗದ್ಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿ : Orientation for entrepreneurship has to start right from the schools. In schools, teachers need to highlight the role of entrepreneurship in national development. During college, students must be exposed to business development opportunities and must be trained towards the creation of new enterprises. Parents should encourage their children to take up new ventures after their education. We should cultivate a mindset that ‘Idea is wealth’. The government must create a facilitating environment for the provision of venture capital for innovative ideas without collateral security. Universities and engineering and management institutions should work with banks and other funding agencies towards simplifying procedures for setting up businesses and working with entrepreneurs till the project becomes self-sustaining and viable. Procedures in government should facilitate the spotting and recognition of new Indian talent in entrepreneurship by creating a level playing field for healthy competition. Citizens who can afford it should turn themselves into angel investors or start venture capital organizations to fund such new ventures. Big and small industries need to have an open mind in order to encourage and partner with young entrepreneurs. ഭ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ : 2x5=10 6) ಅಲ್ಪರ ಸಂಗ ಅಭಿಮಾನ ಭಂಗ ઊં) ಮಾಡಿದುಣ್ಣೋ ಮಾರಾಯ 68) ಕೈ ಕೆಸರಾದರೆ ಬಾಯ್‌ ಮೊಸರು 69) ಮಾತು ಬೆಳ್ಳಿ - ಮೌನ ಬಂಗಾರ (v) ಓದು ಬಕ್ಕಾಲು ಬುದ್ಧಿ ಮುಕ್ಕಾಲು KVMS-C-KND 9 20 (b) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಪದಗಳನ್ನು ಬರೆಯಿರಿ : 25510 0) ಸುಖ 01) ಚೇತನ യ ವಾಸ್ತವ (iv) ಮೃದು യ ಪ್ರಾರಂಭ ¢ ¢ £ ४ ९७ ര) ಕೆಳಗಿನ ಪದಗಳನ್ನು ಒಡೆದು ಸಂಧಿರೂಪ ತಿಳಿಸಿ : 2x5=10 ദ ಕೆಂದಾವರೆ 61) ಚಂದ್ರೋದಯ 011) ಹೂದೋಟ (iv) ವಾಗ್ಧಾನ യ ದೇವೇಂದ್ರ ੧੦ £ ৩ ৩ ९७ (ત) ಕೆಳಗಿನ ಕಾವ್ಯ ಮತ್ತು ವಚನದ ಸಾಲುಗಳು ಯಾವ ಕವಿ ಹಾಗೂ ವಚನಕಾರರಿಂದ ರಚನೆಯಾಗಿದೆ : 2x5=10 ദ ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು 2 0) ಹುಸಿನಗುತ ಬಂದೇವ ನಸುನಗುತ ಬಾಳೋಣ 2 യ £ ನನ್ನ ಚೇತನ ಆಗು ನೀ ಅನಿಕೇತನ 2 (iv) ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ 2 (૪) ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು 2 KVMS-C-KND 10