Full Text Transcript
Text below was recognized via OCR from scanned pages and may contain minor errors. Mathematical formulas and symbols may be approximate - please refer to the PDF for the exact equations.
Civil Services (Main) Examination, 2024 ~ કરા?
ಕನ್ನಡ / KANNADA
(ಕಡ್ಡಾಯ ಪತ್ರಿಕೆ) / (Compulsory)
ವೇಳೆ: ಮೂರು ಗಂಟೆ ಗರಿಷ್ಠ ಅಂಕಗಳು: 800
Time Allowed : Three Hours Maximum Marks : 300
ಪ್ರಶ್ನೆ ಪತ್ರಿಕೆ ನಿರ್ದಿಷ್ಟ ಸೂಚನೆಗಳು
ಪ್ರಶ್ನೆಗಳನ್ನು ಉತ್ತರಿಸುವ ಮುನ್ನಕೆಳಗಿನ ಪ್ರತಿಯೊಂದು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿರಿ :
ಎಲ್ಲಾಪಶ್ಚೆಗಳನ್ನೂ ಉತ್ತರಿಸಬೇಕು.
ಪಶ್ನೆ/ಪ್ರಶ್ನೆಯ ಭಾಗಗಳಿಗೆ ಅನ್ವಯವಾಗುವ ಅಂಕಗಳನ್ನು ಅವುಗಳ ಎದುರಿಗೆ ಕೊಡಲಾಗಿದೆ.
ಉತ್ತರಗಳನ್ನು DIODE ಸೂಚಿಸದ ಹೊರತು, ಕನ್ನಡದಲ್ಲೇ (ಕನ್ನಡ ಲಿಪಿಯಲ್ಲೇ) ಬರೆಯಬೇಕು.
ಎಲ್ಲೆಲ್ಲಿ ಪಶ್ಚೆಗಳಲ್ಲಿ ಪದಗಳ ಮಿತಿಯನ್ನು ಸೂಚಿಸಲಾಗಿದೆಯೋ ಆ ಸೂಚನೆಯನ್ನು ಪಾಲಿಸಬೇಕು. ಪದಗಳ ಮಿತಿ
ಸೂಚಿಸಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆಯಾದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು.
ಯಾವುದಾದರೂ ಪುಟ ಅಥವಾ ಪುಟದ ಭಾಗವನ್ನು ಪಶ್ನೆ ಸಹಿತವಾದ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟಲ್ಲಿ ಆ ಜಾಗವನ್ನು
ಸ್ಪಷ್ಟವಾಗಿ ಪೆನ್ನಿನಿಂದ ಹೊಡೆದು ಹಾಕಬೇಕು.
Question Paper Specific Instructions
Please read each of the following instructions carefully before attempting questions :
All questions are to be attempted.
The number of marks carried by a question/part is indicated against it.
Answers must be written in KANNADA (Kannada script) unless otherwise directed in
the question.
Word limit in questions, wherever specified, should be adhered 10 and if answered in much
longer or shorter than the prescribed length, marks may be deducted.
Any page or portion of the page left blank in the Question-cum-Answer Booklet must be
clearly struck off.
PHKM-C-KND 1
౧1.
९2.
ಕೆಳಕಂಡ ಯಾವುದಾದರೂ ಒಂದು ವಿಷಯದ ಬಗ್ಗೆ 600 ಪದಗಳ ಮಿತಿಯೊಳಗೆ ಪ್ರಬಂಧ
ಬರೆಯಿರಿ :
(8) ಪ್ರಜಾ ಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
യ ಭಾರತದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆಯೇ १
(૭ ಬುಡಕಟ್ಟು ಸಂಸ್ಕೃತಿ ರಕ್ಷಣೆ : ಪ್ರಯತ್ನ ಮತ್ತು ಸಾಧ್ಯತೆಗಳು
(4) ಖಾಲಿ ಗಡಿಗೆ (ಕೊಡ) ಹೆಚ್ಚು ಸಪ್ಪಳ (ಧ್ವನಿ) ಮಾಡುತ್ತದೆ
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಎಚ್ಚರಿಕೆಯಿಂದ ಓದಿ ಕೇಳಿರುವ ಪ್ರಶ್ನೆಗಳಿಗೆ ನೇರ,
ಸರಳ, ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಉತ್ತರಿಸಿ : 12x5=60
ವಿಮರ್ಶೆಯನ್ನು ಸಾಹಿತ್ಯದ ಒಂದು ಅಂಗವೆಂದು ಪರಿಗಣಿಸಲಾಗಿದೆ. ಇದರಿಂದ
ಸಾಹಿತ್ಯವನ್ನು ಅದರ ಮಿತಿಯಲ್ಲಿರಿಸಲು ಸಾಧ್ಯವಾಗಿದೆ. ಸಾಹಿತ್ಯದಲ್ಲಿ ಯಾವಾಗ ಕೆಲವು
ವಿಷಯಗಳು ಸೇರಿ ಅದರ ಸಹಜವಾಗಿ ಹೊಮ್ಮುವ ಸತ್ವಕ್ಕೆ. ಅಡ್ಡಿಯುಂಟು
ಮಾಡುತ್ತದೆಯೋ, Si ಸಾಹಿತ್ಯವು. ದೋಷಪೂರಿತವಾಗುತ್ತದೆ. ಹೇಗೆಂದರೆ
ಸಂಗೀತದಲ್ಲಿಯೂ ಅಪಸ್ವರ ಸೇರಿ ಸಂಗೀತವು ಕಲ್ಮಶಗೊಂಡಾಗ
ದೋಷಪೂರಿತವಾಗುವಂತೆ.
ನಿಜವಾದ ಭಾವನೆಗಳ ಅಭಿವ್ಯಕ್ತಿಯಲ್ಲಿ ಸಂತೋಷವಿರುತ್ತದೆ. ಕೆಟ್ಟ ಭಾವನೆಗಳ
ಅಭಿವ್ಯಕ್ತಿಯಲ್ಲಿ ಕೇವಲ ದುಃಖವಿರುತ್ತದೆ. ಇನ್ನೂ ಕೆಲವರಲ್ಲಿ ನೈಜವಲ್ಲದ ಭಾವನೆಗಳಲ್ಲಿ
ಸಂತೋಷಪಡುವ ಸಾಧ್ಯತೆಯುಂಟು. ಕೆಲವು ಜನ ಹಿಂಸಾತ್ಮಕ ಕೃತ್ಯಗಳನ್ನು
ಮಾಡುವುದರಲ್ಲಿ. ಅಥವಾ ಮತ್ತೊಬ್ಬರ ಸಂಪತ್ತನ್ನು ಅಪಹರಿಸುವುದು, ತಮ್ಮ
ಸ್ವಾರ್ಥಕ್ಕಾಗಿ ಕೆಲವರನ್ನು ಗೋಳಾಡಿನುವುದರಲ್ಲಿ ಸಂತೋಷಪಡುತ್ತಾರೆ. ಆದರೆ ಇದು
ಮನಸ್ಸಿಗೆ ನೈಜವಾದ ಪ್ರವೃತ್ತಿಯಲ್ಲ. ಒಬ್ಬ ಕಳ್ಳ ಬೆಳಕಿಗಿಂತಲೂ ಕತ್ತಲನ್ನೇ ಹೆಚ್ಚು
ಪ್ರೀತಿಸುತ್ತಾನೆ. ಆದರೆ ಇದರಿಂದ ಬೆಳಕಿನ ಶ್ರೇಷ್ಠತೆಗೆ ಧಕ್ಕೆಯಾಗುವುದಿಲ್ಲ.
ನಾವು ಇತರರೊಡನೆ ಒಂದುಗೂಡಲು ಸಾಧ್ಯವಾಗುವ ಭಾವನೆಗಳೇ ನಿಜವಾದ
ಭಾವನೆಗಳು. 'ಪ್ರೀತಿ' ನಮ್ಮನ್ನು ಪರಸ್ಪರ ಒಂದುಗೂಡಿಸುತ್ತದೆ, ಅಹಂಕಾರ ನಮ್ಮನ್ನು
ಇತರರಿಂದ ದೂರ ಮಾಡುತ್ತದೆ. ಯಾವುದೇ ವ್ಯಕ್ತಿ ದುರಹಂಕಾರಿಯಾಗಿದ್ದರೆ ಆತ/ಆಕೆ
ಇತರರ ಜೊತೆ ಒಂದುಗೂಡಲು ಹೇಗೆ ಸಾಧ್ಯ?
PHKM-C-KND 2
ಭಕ್ತಿಯನ್ನು ಅಭಿವ್ಯಕ್ತಿಸಲು ಮೂರ್ತ ವಸ್ತುವಿನ ಅಗತ್ಯವಿದೆ. ಕರುಣೆಯನ್ನು
ತೋರಿಸಲು ಕೂಡಾ ಸ್ವೀಕರಿಸುವವರ ಅಗತ್ಯವಿದೆ. ತಾಳ್ಮೆ ಮತ್ತು ಧೈರ್ಯವನ್ನು
ತೋರಿಸಲೂ ಕೂಡಾ ಅವುಗಳನ್ನು ಸ್ವೀಕರಿಸುವ ವ್ಯಕ್ತಿ ಇರಬೇಕು. ಅಂದರೆ, ನಮ್ಮ
ಭಾವನೆಗಳನ್ನು. ಜಾಗೃತಗೊಳಿಸಲು. ನಾವು. ಬಾಹ್ಯ. ಸಂಗತಿಗಳ ಜೊತೆ
ಸೌಹಾರ್ದಗೊಳಿಸಬೇಕು. ಬಾಹ್ಯ ಜಗತ್ತು ನಮ್ಮ ಮೇಲೆ ಏನೂ ಪರಿಣಾಮ
ಮಾಡುವುದಿಲ್ಲವೆಂದು ನಾವು ತಿಳಿದರೆ, ಮಗನ ಸಾವಿನಿಂದ ಶೋತಿಸುತ್ತಿರುವವರಿಗಾಗಿ
ಕೆಲವು. ಹನಿ. ಕಣ್ಣೀರನ್ನು ಸುರಿಸಲು ನಮಗೆ ಸಾಧ್ಯವಿಲ್ಲವಾದರೆ, ୭୪୦୦
ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ನಮಗೆ ಸಾಧ್ಯವಿಲ್ಲವಾದರೆ ಆಗ ನಾವು ಜಗತ್ತಿನ
ಆಗುಹೋಗುಗಳನ್ನು ಮೀರಿನಿಂತು ನಾವು. 'ನಿರ್ವಾಣ' ದ ಸ್ಥಿತಿಯನ್ನು ಪಡೆದಿದ್ದೇವೆ
ಎಂದರ್ಥ. ಅಂತಹ ಸ್ಥಿತಿಗೆ ಸಾಹಿತ್ಯದಲ್ಲಿ ಯಾವುದೇ ಮೌಲ್ಯವಿಲ್ಲ. ಒಬ್ಬ ವ್ಯಕ್ತಿಯು
ಜಗತ್ತಿನ ಸುಖ, ದುಃಖಗಳಲ್ಲಿ ತಾನೂ ಭಾಗಿಯಾಗಿ ಅನುಭವಿಸಬಲ್ಲನಾದರೆ ಅಥವಾ
ಇತರರಲ್ಲಿ ಸುಖ, ದುಃಖಗಳನ್ನು ಸೃಷ್ಟಿಸುವ. ಸಾಮರ್ಥ್ಯವುಳ್ಳವನಾದರೆ ಅವರು
ನಿಜವಾದ ಸಾಹಿತಿಯಾಗುತ್ತಾರೆ. ಅಸಂತೋಷದ ಅನುಭವವನ್ನು ತಾನೊಬ್ಬನೇ
ಅನುಭವಿಸಿದರೆ... ಸಾಕಾಗುವುದಿಲ್ಲ, ಕಲಾವಿದನಾದವನು.. છ ಅನುಭವವನ್ನು
ಅಭಿವ್ಯಕ್ತಿಸುವ ಸಾಮರ್ಥ್ಯ ಉಳ್ಳವನಾಗಿರಬೇಕು. ಆದರೆ ಬೇರೆ ಬೇರೆ ಪರಿಸ್ಥಿತಿಗಳನ್ನು
ಜನರು ಬೇರೆ ಬೇರೆಯಾದ ದೃಷ್ಟಿಕೋನಗಳಿಂದ ನೋಡುತ್ತಾರೆ. ಎಲ್ಲ ಮಾನವರಲ್ಲಿ
ಭಾವನೆಗಳಲ್ಲಿ ಸಾಮ್ಯತೆಯಿದ್ದರೂ, ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಅವರವರ ಪ್ರತಿಕ್ರಿಯೆಯ
ಮೇಲೆ ಪರಿಣಾಮ ಬೀರುತ್ತದೆ. ನಾವು ಒಂದು ವೇಳೆ ರೈತರ ಜೊತೆಯಲ್ಲಿ ಜೀವಿಸಿದ್ದರೆ
ಅಥವಾ ಅವರ ಜೊತೆ ಇರುವ ಅವಕಾಶ ದೊರೆತರೆ, ನಾವು ಸಹಜವಾಗಿ ಅವರ ಸುಖ,
ಸಂತೋಷಗಳನ್ನು ನಮ್ಮ ಅನುಭವಗಳನ್ನಾಗಿ ಪರಿಗಣಿಸುತ್ತೇವೆ. ಆಗ ನಮ್ಮ
ಭಾವನೆಗಳ ತೀವ್ರತೆಯ ಅನುಸಾರ ಅವರ ಪರಿಸ್ಥಿತಿಗಳ ಪ್ರಭಾವಕ್ಕೆ ಒಳಗಾಗುತ್ತೇವೆ.
ಅದೇ ರೀತಿ ಇತರ ಪರಿಸ್ಥಿತಿಗಳನ್ನೂ ಅರ್ಥಮಾಡಿಕೊಳ್ಳಬೇಕು. ಒಬ್ಬ ನಿರ್ದಿಷ್ಟ ವ್ಯಕ್ತಿ
ರೈತರ ಪರವಾಗಿ ಅಥವಾ ಕಾರ್ಮಿಕರ ಪರವಾಗಿ ಅಥವಾ ಯಾವುದೇ ಚಳುವಳಿಯ
ಮೇಲೆ ಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಥೈಸಿದರೆ ಅದು ಅನ್ಯಾಯವಾಗುತ್ತದೆ.
ಸಾಹಿತ್ಯ ಮತ್ತು ಪ್ರಚಾರದ ನಡುವಿನ ವ್ಯತ್ಯಾಸವೇನು १ ಪ್ರಚಾರದಲ್ಲಿ ಸ್ವಂತದ ಕುರಿತ
PHKM-C-KND 3
03.
ಜಾಹಿರಾತಿಲ್ಲದಿದ್ದರೂ ಕೂಡಾ ಮಾರ್ಗದ ಸಿಂಧುತ್ವದ ಬಗ್ಗೆ ಲೆಕ್ಕಿಸದೇ ಒಂದು ನಿರ್ದಿಷ್ಟ
ಉದ್ದೇಶ ಸಾಧನೆಯನ್ನು ಪೂರೈಸುವ ಉತ್ಸುಕತೆ ಇರುತ್ತದೆ. ಸಾಹಿತ್ಯವು ಎಲ್ಲರನ್ನೂ
ಸಂತೈಸುವ, ಸಂತೋಷಗೊಳಿಸುವ ಹಿತವಾದ ತಂಗಾಳಿ. ಪ್ರಚಾರ ಎನ್ನುವುದು
ಚಂಡಮಾರುತದಂತೆ ಹಸಿರಾದ ಗಿಡಮರಗಳನ್ನು ಬೇರು ಸಮೇತ ಕಿತ್ತುಹಾಕುವುದು,
ಗುಡಿಸಲು. ಮತ್ತು. ಅರಮನೆಗಳೆರಡನ್ನೂ ಅಲುಗಾಡಿಸಬಲ್ಲದು. = ಪ್ರಚಾರವು
ನೀರಸವಾಗಿದ್ದು ಸಂತೋಷ ತರುವಂಥದ್ದಲ್ಲ. ಆದರೆ ಒಬ್ಬ ಜಾಣ ಕಲಾವಿದ ಪ್ರಚಾರದಲ್ಲಿ
ಸೌಂದರ್ಯ ಮತ್ತು ಪರಿಮಳವನ್ನು ತುಂಬುವ ಮೂಲಕ ಯಶಸ್ವಿಯಾದರೆ ಅದೇ ಕೃತಿ
ಒಳ್ಳೆಯ ಸಾಹಿತ್ಯವಾಗಿ ಮಾರ್ಪಡುತ್ತದೆ.
(৪) ವಿಮರ್ಶೆಯನ್ನು ಸಾಹಿತ್ಯದ ಭಾಗವಾಗಿ ಏಕೆ ಪರಿಗಣಿಸಲಾಗಿದೆ ?
0) ಸತ್ಯ ಮತ್ತು ಅಸತ್ಯ ಅಭಿವ್ಯಕ್ತಿಗಳೆಂದರೆ ಏನು ?
(૭ ಯಾವುದು ಮನಸ್ಸಿನ ಸಹಜ ಪ್ರವೃತ್ತಿಯಲ್ಲ?
(4) ಲೇಖಕನ ಅಭಿಪ್ರಾಯದಲ್ಲಿ ಯಾರು ನಿಜವಾದ ಸಾಹಿತಿ ?
(০) ಸಾಹಿತ್ಯ ಮತ್ತು ಪ್ರಚಾರದ ನಡುವಿನ ವ್ಯತ್ಯಾಸಗಳೇನು ?
ಕೆಳಕಂಡ ಪಠ್ಯವನ್ನು ಅದರ ಮೂರನೆಯ ಒಂದು ಭಾಗಕ್ಕೆ ಮೀರದಂತೆ ಸಂಗ್ರಹಿಸಿ
ನಿಮ್ಮದೇ ಆದ ಪದಗಳಲ್ಲಿ ಬರೆಯಿರಿ, ತಲೆ ಬರಹ ಕೊಡುವ ಅಗತ್ಯ ಇಲ್ಲ :
ಅಸೂಯೆ, ಮತ್ಸರ ಅಥವಾ ಹೊಟ್ಟೆಕಿಚ್ಚು ಎನ್ನುವುದು ಒಂದು ನಿರ್ದಿಷ್ಟವ್ಯಕ್ತಿಯನ್ನು
ಗುರಿಯಾಗಿಸಿಕೊಂಡಿರುತ್ತದೆ ಎಂದು ಗಮನಿಸುವುದು ಮುಖ್ಯ. ಯಾವುದೇ ಶ್ರೀಮಂತ,
ಸದ್ಗುಣವಂತ ಅಥವಾ ಗೌರವಾನ್ವಿತ ವ್ಯಕ್ತಿಯ ಬಗ್ಗೆ ನಾವು ಹೊಟ್ಟೆಕಿಚ್ಚು ತಾಳುವುದಿಲ್ಲ.
ಬೇರೆಯವರು ನಮ್ಮನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಹೋಲಿಸಿದ್ದಾರೆ ಅಥವಾ ಹೋಲಿಸಲಿದ್ದಾರೆ,
ನಮ್ಮನ್ನು ಅವರ ವಿರುದ್ಧ ಎತ್ತಿಕಟ್ಟಿದ್ದಾರೆ ಅಥವಾ ಕಟ್ಟಲಿದ್ದಾರೆ ಎನ್ನಿಸಿದಾಗ ಮಾತ್ರ
ಹೊಟ್ಟೆಕಿಚ್ಚು ಉಂಟಾಗುತ್ತದೆ. ಯಾರು ನಮಗೆ ದೂರವಾಗಿದ್ದಾರೋ ಅಥವಾ ನಮಗೆ
ಸಂಬಂಧಪಟ್ಟಿಲ್ಲವೋ ಮತ್ತು ನಮ್ಮನ್ನು ಒಟ್ಟಿಗೆ ಪರಿಗಣಿಸಿ. ಹೋಲಿಸುವ
PHKM-C-KND 4
72
72
72
72
72
66
ಸಾಧ್ಯತೆಗಳಿಲ್ಲೋ ಅವರ ಕುರಿತು. ನಮಗೆ ಹೊಟ್ಟೆಕಿಚ್ಚು ಉಂಟಾಗುವುದಿಲ್ಲ.
ಕಾಶಿಯಲ್ಲಿರುವ ಒಬ್ಬ ಶ್ರೀಮಂತ ವ್ಯಕ್ತಿ ಯುರೋಪಿನಲ್ಲಿ ವಾಸವಾಗಿರುವ ವ್ಯಕ್ತಿಯ
ಶ್ರೀಮಂತಿಕೆಯ ಬಗ್ಗೆ ಹೊಟ್ಟೆಕಿಚ್ಚು ಪಡುವುದಿಲ್ಲ. ಒಬ ಹಿಂದಿ ಕವಿಯು, ಇಂಗ್ಲಿಷ್ ಕವಿಯ
ಪ್ರಾಮುಖ್ಯತೆಯ ಬಗ್ಗೆ ಹೊಟ್ಟೆಕಿಚ್ಚುಪಡುವುದಿಲ್ಲ.. ನೆಂಟರು, ಬಾಲ್ಯ ಸ್ನೇಹಿತರು,
ಸಹಪಾಠಿಗಳು ಮತ್ತು ನೆರೆಹೊರೆಯವರ ನಡುವೆ ಬೆಳೆಯುವುದನ್ನು ನೋಡುತ್ತೇವೆ.
ಬಾಲ್ಯದಿಂದಲೂ ಒಟ್ಟಿಗೇ ಕಾಲಕಳೆದವರು. ಪರಸ್ಪರರ ಅಭಿವೃದ್ಧಿಯನ್ನು ನೋಡಿ
ಹೊಟ್ಟೆಕಿಚ್ಚುಪಡಬಹುದು. ಇಬ್ಬರು ಗೆಳೆಯರಲ್ಲಿ ಒಬ್ಬನು ಯಶಸ್ಸು ಸಾಧಿಸಿ ಉತ್ತಮ
ಸ್ಥಾನವನ್ನು ಗಳಿಸಿದರೆ. ಸಾಮಾನ್ಯವಾಗಿ ಆತ ಮತ್ತೊಬ್ಬನೂ ಅದೇ ಸ್ಥಾನವನ್ನು
ಗಳಿಸಿಕೊಳ್ಳುವುದನ್ನು ತಪ್ಪಿಸಲು ಯತ್ನಿಸುತ್ತಾನೆ ಎನ್ನುವುದನ್ನು ನೋಡಿದ್ದೇವೆ. ಒಬ್ಬ
ಯಶಸ್ವಿ ವ್ಯಕ್ತಿಯ ಸಾಧನೆಯ ಹಾದಿಯ ಅಡ್ಡಿಗಳ ಹಿಂದಿನ ಗೋಪ್ಯ ಕಾರಣಗಳನ್ನು
ಅನಾವರಣಗೊಳಿಸಲು ಯತ್ನಿಸಿದಾಗ ಅದರ ಹಿಂದೆ ಒಬ್ಬ ದೀರ್ಥಕಾಲದ ಗೆಳೆಯನ
ಕೈವಾಡವಿದೆ. ಎಂದು ಅರಿತುಕೊಳ್ಳುವುದು. ಅಸಾಮಾನ್ಯವೇನಲ್ಲ. ನಾವು
ಇತರರೊಂದಿಗೆ... ಸಂಪರ್ಕ ಏರ್ಪಡಿಸಿಕೊಂಡು. ಅವರನ್ನು. ನಮ್ಮೊಂದಿಗೆ
ಶಾಮೀಲಾಗಿಸಿಕೊಂಡಾಗ ನಾವು ಸಹಾನುಭೂತಿಯ ಮತ್ತು ಸಹಾಯದ ಸಾಧ್ಯತೆಯನ್ನು
ಮಾತ್ರವಲ್ಲಾ, ನಮ್ಮ ನಡುವೆ. ಹೊಟ್ಟೆಕಿಚ್ಚು ಮತ್ತು ವೈಷಮ್ಯ ಉಂಟಾಗುವ
ಸಾಧ್ಯತೆಯನ್ನೂ ಬಿತ್ತಿರುತ್ತೇವೆ. ನಮ್ಮ ಕ್ರಿಯೆಗಳ ಮೂಲಕ ಒಳ್ಳೆಯತನವನ್ನು ಮಾತ್ರ
ಉಂಟುಮಾಡುವುದು ಸಾಧ್ಯವಿಲ್ಲ. ಹಾಗಾಗಿ ಇದು ಭವಿಷ್ಯದ ಅಂತರ್ಗತ ಅನಿಶ್ಚಿತತೆಗೆ
ವಿರುದ್ಧವಾಗಿದೆ. ಭವಿಷ್ಯದ ಅನಿಶ್ಚಿತತೆ ಅಲುಗಾಡಿಸಲಾಗದ್ದು ಮತ್ತು ಗೆಲ್ಲಲಾಗದ್ದು.
ನಮ್ಮೆಲ್ಲಾ ಜ್ಞಾನ ಮತ್ತು ವಿವೇಚನೆಯಿಂದಲೂ ಕೂಡಾ ನಾವು ಅದನ್ನು ಸಂಪೂರ್ಣವಾಗಿ
ಗೆಲ್ಸಲಾಗುವುದಿಲ್ಲ.
ಈಗ, ನಿರ್ಣಾಯಕವಾದ ಸಂಗತಿ ಎಂದರೆ, ಹೊಟ್ಟೆಕಿಚ್ಚಿನ ಪರಿಧಿಯೊಳಗೆ,
ಹೊಟ್ಟೆ ಕಿಚ್ಚಿನ ವ್ಯಕ್ತಿ ಮತ್ತು ಅಪೇಕ್ಷಿತ ವಸ್ತು ಮಾತ್ರವಲ್ಲಾ, ಇಂತಹ ಕ್ರಿಯಾತ್ಮಕತೆಯನ್ನು
ಗಮನಿಸುವ ಸಮಾಜ ಕೂಡಾ ಅಗತ್ಯವಿದೆ. ಸಮಾಜದ ಗ್ರಹಿಕೆಯ ಮೇಲೆ ಪರಿಣಾಮ
ಬೀರುವ ಅಗತ್ಯತೆಯಿಂದಲೂ ಹೊಟ್ಟೆಕಿಚ್ಚು ಉದ್ಭವಿಸುತ್ತದೆ. ಸಮೃದ್ಧಿ, ಸದ್ಗುಣ, ಮತ್ತು
PHKM-C-KND 5
ಉನ್ನತ ಗೌರವಗಳು ಸಮುದಾಯಕ್ಕೆ ತಿಳಿಸದಂತೆ ಖಾಸಗಿ ಸಂತೃಪ್ತಿ ಮಾತು
ಸಂತೋಷಕ್ಕೆ ಮಾತ್ರ ಮೀಸಲಾಗಿ ವೈಯಕ್ತಿಕವಾಗಿ ಅನುಭವಿಸುವಂತಹದ್ದಲ್ಲ. ನಾವು
ಬೇರೆಯವರಷ್ಟು ಶ್ರೀಮಂತಿಕೆ ಅಥವಾ ಸದ್ಗುಣಶೀಲವಲ್ಲದಿದ್ದರೂ ಸಮಾಜವು ನಮ್ಮನ್ನು
ಅಷ್ಟೇ ಸಮಾನ ಅಥವಾ ಅದಕ್ಕಿಂತ ಉನ್ನತ ಮಟ್ಟದಲ್ಲಿ ಗ್ರಹಿಸಿದರೆ. ನಾವು
ಸಂತೃಪ್ತರಾಗಿದ್ದು ತೀವ್ರ ಹೊಟ್ಟೆಕಿಚ್ಚಿನಿಂದ ಬಾಧಿತರಾಗುವುದಿಲ್ಲ. ಯಾವುದನ್ನಾದರು
ಪಡೆಯುವುದರಲ್ಲಿ ಸಾವು ವಿಫಲರಾಗಿದ್ದರೂ ಸಮಾಜದ ಗ್ರಹಿಕೆಯ ಕಾರಣ ನಾವು
ಸಂಸ್ತ್ರುಪ್ತರಾಗಿರುವುದು ಒಂದು ವಿಚಿತ್ರ. ಹೊಟ್ಟೆಕಿಚ್ಚು ಎನ್ನುವುದು ಸಾಮಾಜಿಕ ಅಸ್ತಿತ್ವದ
ಕೃತಕತೆಯಿಂದ ಉದ್ಭವವಾಗುತ್ತದೆ. ಅದರ ಮೋಹಕ್ಕೆ ಸಿಕ್ಕು ನಾವು ಇತರರ ಬೆಳವಣಿಗೆ
ஸ்ஸ் ಪ್ರಗತಿಯಿಂದ. ನಮ್ಮ ಹಿತಾಸಕ್ತಿಗೆ. ಯಾವುದೇ ಸ್ಪಷ್ಟವಾದ
ಹಾನಿಗೊಳಗಾಗದಿದ್ದರು.. ಕೂಡಾ ಅನಗತ್ಯವಾಗಿ. ನಾವು. ಅತೃಪ್ತಿಯನ್ನು
ಅನುಭವಿಸುತ್ತೇವೆ.
ಒಬ್ಬರು ನ್ಯಾಯಾಧೀಶರು ನ್ಯಾಯವನ್ನು ಒದಗಿಸುತ್ತಾರೆ. ಒಬ್ಬ ಗಾರೆಯವನು
ಇಟ್ಟಿಗೆ ಕೂರಿಸಿ ಕಟ್ಟುತ್ತಾನೆ. ಸಾಮಾಜಿಕ ಹಿತಾಸಕ್ತಿಯ ದೃಷ್ಟಿಯಿಂದ ನ್ಯಾಯಾಧೀಶರು
ಗಾರೆಯವನು ಯಾವುದೇ ರೀತಿಯಲ್ಲಿ ತಮಗಿಂತ ನಿಕೃಷ್ಟ ಎಂದು ಅಭಿವ್ಯಕ್ತಿಸುವುದು
ಸರಿಯಲ್ಲ. "ಉತ್ತಮ-ಅಧಮ" ಎನ್ನುವ ಆಲೋಚನೆಯು ಆಳವಾಗಿ ಬೇರೂರಿದ
ಸಮುದಾಯದಲ್ಲಿ ವಿವಿಧ ವರ್ಗಗಳಲ್ಲಿ ಹೊಟ್ಟೆಕಿಚ್ಚು ಎನ್ನುವುದು ಸ್ಥಾಯಿಯಾಗಿ
ನೆಲೆಯೂರುತ್ತದೆ ಮತ್ತು ಐಕ್ಯತೆಯ ಕಡೆಗೆ ಪ್ರಗತಿಯು ಅಪರೂಪದ ಸಂದರ್ಭಗಳಲ್ಲಿ
ಮಾತ್ರ ಗೋಚರವಾಗುತ್ತದೆ. ಜನರು ತಮ್ಮ ಜೀವನಾಧಾರವಾಗಿಸಿಕೊಂಡ ವಿವಿಧ
ವೃತ್ತಿಗಳ ಹಿರಿಮೆ ಮತ್ತು ಕೀಳರಿಮೆಗಳ ಬಗ್ಗೆ ದೊಡ್ಡ ಪಂಚಾಯಿತಿ ಮಾಡದಿದ್ದಲ್ಲಿ, ಅವರ
ವೃತ್ತಿಗಳ ವೈವಿಧ್ಯತೆಗಳನ್ನು ಗೌರವಿಸಿದಲ್ಲಿ ಸಮಾಜದಲ್ಲಿರುವ ಬಹಳಷ್ಟು ಅತೃಪ್ತಿಯನ್ನು
ನಿವಾರಿಸಬಹುದು. ಅಸಮಾನತೆಯ ಭಾವವು ಧಾರಾಳವಾಗಿ ಪ್ರಕಟಿತವಾದಲ್ಲಿ ಮತ್ತು
ಮನುಷ್ಯರ ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದಲ್ಲಿ ಆಗ ಜನರ ಶಕ್ತಿಯು ಕೆಲವು
ನಿರ್ದಿಷ್ಟ ಕ್ಷೇತ್ರಗಳಿಗೆ ಮಾತ್ರ ನಿರ್ದೇಶಿತವಾಗಿ ಕಾರ್ಯಸ್ಥಳಗಳು ಅಸಮಾನವಾಗುತ್ತವೆ.
(351 ಪದಗಳು)
PHKM-C-KND 6
Q4.
ಕೆಳಗಿನ ಗದ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸಿ :
ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಉದ್ಯಮಗಳನ್ನು ಕುರಿತ ಚರ್ಚೆಯು
ಈ ದಿನಗಳಲ್ಲಿ ಭಾರತದಲ್ಲಿ ಮತ್ತೊಮ್ಮೆ ಪುನರುಜ್ಜೀವನಗೊಂಡಿದೆ. ૨૦૭૭
ಕೈಗಾರಿಕೆಗಳ ಕೇಂದ್ರದಲ್ಲಿರುವುದು ಚಿಕ್ಕ ಆವರಣಗಳ, ಕನಿಷ್ಠ ಬಂಡವಾಳ ಹೂಡಿಕೆಯ
ಮತ್ತು ಕಡಿಮೆ ಕಾರ್ಮಿಕರ ಅಗತ್ಯವಿರುವ ಸಣ್ಣ ಗೃಹಾಧಾರಿತ ಉದ್ಯಮಗಳು. ಈ
ಮಾದರಿಯು. ವ್ಯಕ್ತಿಯನ್ನು. கைலே ಮತ್ತು... ತಯಾರಕರಾಗಲು
ಅವಕಾಶಕೊಡುತ್ತದೆ ಮತ್ತು ಅವರಿಗೆ ತಮ್ಮ ಜೀವನಾಧಾರವನ್ನು ಗಳಿಸುವ ಸವಾಲನ್ನು
ಎದುರಿಸಲು ಸಾಧ್ಯವಾಗುತ್ತದೆ. ಆ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸಲು
ಹಾದಿಯಾಗುತ್ತದೆ. ಜೊತೆಗೆ ಇದು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತದೆ.
ಮಹಾತ್ಮ ಗಾಂಧಿಯವರು ಸ್ವಾತಂತ್ರ ಸಂಗ್ರಾಮದ ಕಾಲದಲ್ಲೇ ಭಾರತದಂತಹ ದೇಶದ
ಅಭಿವೃದ್ಧಿ ಹಿತಾಸಕ್ತಿಗೆ. ಸಣ್ಣ ಗುಡಿ ಕೈಗಾರಿಕೆಗಳೇ ಕಾರಣವಾಗುತ್ತವೆಂದು
ಕಂಡುಕೊಂಡಿದ್ದರು... ಸಣ್ಣ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು
ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಲು ಅವರು ಅನೇಕರಿಗೆ
ಸ್ಫೂರ್ತಿ ನೀಡಿದ್ದರು... ಈ ಮುಂದಾಲೋಚನೆಯಿದ್ದಾಗಲೂ, ಸ್ವಾತಂತ್ರ್ಯಾನಂತರದ
ನಾಯಕತ್ವದಲ್ಲಿ ಈ ಸಣ್ಣ ಕೈಗಾರಿಕೆಯನ್ನು ಹೆಚ್ಚಿನಮಟ್ಟಿಗೆ ಕಡೆಗಣಿಸಿ ಬೃಹತ್
ಉದ್ಯಮಗಳು ಪ್ರಾಬಲ್ಯ ಹೊಂದಲು ಅವಕಾಶ ನೀಡಲಾಯಿತು... ಈ ಬೃಹತ್
ಉದ್ಯಮಗಳು ಶ್ರೀಮಂತ ವರ್ಗದ ಖಾಸಗಿ ಆಸ್ತಿಗಳಾಗಿ ಉಳಿದವು. ಬೆಳೆಯುತ್ತಿದ್ದ
ಜನಸಂಖ್ಯೆ, ಶಿಕ್ಷಣದ ಪ್ರಸಾರ, ಜನಸಾಮಾನ್ಯರಲ್ಲಿ ಜಾಗೃತಿ, ತಮ್ಮ ಹಕ್ಕುಗಳನ್ನು
ಗುರುತಿಸಿ ಬೇಡಿಕೆಯಿಟ್ಟಿದ್ದು, ನಿರುದ್ಯೋಗಿಗಳ ಹೆಚ್ಚುತ್ತಲೇ ಇದ್ದ ಸಾಲು - ಇವೆಲ್ಲವೂ
ತಡವಾಗಿಯಾದರೂ, ಹಿಂದೆಂದಿಗಿಂತ ಹೆಚ್ಚಿಗೆ ಪ್ರಜ್ಞಾವಂತ ಚಿಂತಕರಲ್ಲಿ ಗಾಂಧೀ
ತತ್ವಗಳನ್ನು ಮರುಪರಿಗಣಿಸಲು ಪ್ರೇರೇಪಿಸಿದೆ. ಇವತ್ತು ಸಣ್ಣ ಕೈಗಾರಿಕೆಗಳನ್ನು
ಅಳವಡಿಸಿಕೊಳ್ಳುವುದು ರಾಷ್ಟ್ರದ ಅಗತ್ಯಗಳಿಗೆ ಪೂರಕವಾಗಿರುತ್ತದೆ ಎನ್ನುವ ಪ್ರಜ್ಞೆ
ಹೆಚ್ಚುತ್ತಿದೆ... ಪರಿಣಾಮವಾಗಿ, ದೇಶದುದ್ದಗಲಕ್ಕೂ MB ಕೈಗಾರಿಕೆಗಳ ಜಾಲ
ಪ್ರಸರಣಗೊಂಡಿದೆ.
PHKM-C-KND 7
20
Q5.
Qe.
ಕೆಳಗಿನ ಗದ್ಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿ :
In our democratic system, the press has a vital role. While there has
been large-scale expansion of the print and visual media in recent years, a
focused approach to dealing with major societal and political issues has still
to evolve. There is, as yet, excessive and exaggerated coverage of exposures
and scandals and far too little well-informed comment or analysis of the
various deep-rooted factors which generate the continuing malaise. The
media could make an extremely useful contribution by devoting adequate
coverage to tasks well done, highlighting the achievements of honest and
efficient public servants and organizations, according special attention to
developments in the remote and backward areas of our country. Our media is
free and unfettered. It should be able to expose cases and incidents involving
irregular and unlawful exercise of authority and abuses of all kinds. The
existing ills in our socio-political environment will, on present reckoning,
take considerable time to remedy. The Department of Personnel and
Administrative Reforms should focus on establishing institutions responsible
for all personnel matters — appointments, postings, transfers etc. — without
any external interference. Also, there is a need for adoption of a robust code
of ethics to be followed by those involved in public functioning.
20
ഭ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ : 2x5=10
ઉં) ಅನ್ನ Sew, ಸಾಕೆನಿಸಬಹುದು, ಹೊನ್ನು ಕೊಟ್ಟು ಸಾಕೆನಿಸಲಾಗದು.
Gi) ಹುಲಿಬಣ್ಣಕ್ಕೆ ಹೋಗಿ ಸರಿ ಮೈ ಸುಟ್ಟುಗೊಂಡಿತ್ತಂತೆ
01) ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
(iv) ತುಸು ತಿಂದರೂ ಕಸ ತಿನ್ನಬಾರದು
യ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ?
PHKM-C-KND 8
യ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಪದಗಳನ್ನು ಬರೆಯಿರಿ : 2x5=10
ദ ಶ್ವಾಸ 2
യ ಸ್ಥಾವರ 2
68) ತೇಜ 2
(iv) ಅರ್ಥ 9
(श) ಮಿಲನ 2
(૭ ಕೆಳಗಿನ ಪದಗಳಲ್ಲಿನ ವಿಭಕ್ತಿಪ್ರತ್ಯಯಗಳನ್ನು ಗುರುತಿಸಿ : 2x5=10
6) ಲಕ್ಷ್ಮಣನಲ್ಲಿ 2
ദ ২৫৬৫০৪০১০০৪ 2
(1) ರಾಮನಿಗೆ 2
(४) ಭೀಮನನ್ನು 2
(1) ಕೃಷ್ಣನು 2
(ત) ವಚನದ ಸಾಲು ಯಾರಿಂದ ರಚನೆಯಾಗಿದೆ : 2x5=10
ദ ಜಲಚರಕೇಕೆ ತೆಪ್ಪದ ಹಂಗು 2
ઊં) ಭಕ್ತನಾದಡೆ ಬಾಳಹಣ್ಣಿನಂತಿರಬೇಕು 2
യ ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ 2
69) ಕಾಯಕದಲ್ಲಿ ನಿರತನಾದರೆ 2
೪) ಬೆಟ್ಟದ ಮೇಲೊಂದು ಮನೆಯ ಮಾಡಿ 2
PHKM-C-KND 9
= =, ଓ জলত লা ता
அக்காவ 2. पाला ൧
` ५ तर
লে உ कण ।

