Full Text Transcript
Text below was recognized via OCR from scanned pages and may contain minor errors. Mathematical formulas and symbols may be approximate - please refer to the PDF for the exact equations.
Civil Services (Main)
Examination- 2025 SLPM-C-KND
ಕನ್ನಡ / KANNADA
(ಕಡ್ಡಾಯ ಪತ್ರಿಕೆ) / (Compulsory)
ವೇಳೆ: ಮೂರು ಗಂಟೆ ಗರಿಷ್ಠ ಅಂಕಗಳು: 300
Time Allowed : Three Hours Maximum Marks : 300
ಪ್ರಶ್ನೆ ಪತ್ರಿಕೆ ನಿರ್ದಿಷ್ಟ ಸೂಚನೆಗಳು
ಪ್ರಶ್ನೆಗಳನ್ನು ಉತ್ತರಿಸುವ ಮುನ್ನಕೆಳಗಿನ ಪ್ರತಿಯೊಂದು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿರಿ :
ಎಲ್ಲಾ ಪ್ರಶ್ನೆಗಳನ್ನೂ ಉತ್ತರಿಸಬೇಕು.
ಪಶ್ನೆ/ಪ್ರಶ್ನೆಯ ಭಾಗಗಳಿಗೆ ಅನ್ಹಯವಾಗುವ ಅಂಕಗಳನ್ನು ಅವುಗಳ ಎದುರಿಗೆ ಕೊಡಲಾಗಿದೆ.
ಉತ್ತರಗಳನ್ನು ಪ್ರಶ್ನೆಯಲ್ಲಿ ಸೂಚಿಸದ ಹೊರತು, ಕನ್ನಡದಲ್ಲೇ (ಕನ್ನಡ ಲಿಪಿಯಲ್ಲೇ) ಬರೆಯಬೇಕು.
ಎಲ್ಲೆಲ್ಲಿ ಪಶ್ಚೆಗಳಲ್ಲಿ ಪದಗಳ ಮಿತಿಯನ್ನು ಸೂಚಿಸಲಾಗಿದೆಯೋ ಆ ಸೂಚನೆಯನ್ನು ಪಾಲಿಸಬೇಕು. ಪದಗಳ ಮಿತಿ
ಸೂಚಿಸಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆಯಾದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು.
ಯಾವುದಾದರೂ ಪುಟ ಅಥವಾ ಪುಟದ ಭಾಗವನ್ನು ಪಶ್ನೆ ಸಹಿತವಾದ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟಲ್ಲಿ ಆ ಜಾಗವನ್ನು
ಸ್ಪಷ್ಟವಾಗಿ ಪೆನ್ನಿನಿಂದ ಹೊಡೆದು ಹಾಕಬೇಕು.
Question Paper Specific Instructions
Please read each of the following instructions carefully before attempting questions :
All questions are to be attempted.
The number of marks carried by a question/part is indicated against it.
Answers must be written in KANNADA (Kannada script) unless otherwise directed in
the question.
Word limit in questions, wherever specified, should be adhered to and if answered in much
longer or shorter than the prescribed length, marks may be deducted.
Any page or portion of the page left blank in the Question-cum-Answer Booklet must be
clearly struck off:
SLPM-C-KND 1
Ql. ಕೆಳಕಂಡ ಯಾವುದಾದರೂ ಒಂದು ವಿಷಯದ ಬಗ್ಗೆ 600 ಪದಗಳ ಮಿತಿಯೊಳಗೆ ಪ್ರಬಂಧ
ಬರೆಯಿರಿ : 100
ഭ ಭಾರತೀಯ ಜ್ಞಾನ ಪರಂಪರೆಯ ಪ್ರಸ್ತುತತೆ
6) ಹೆಚ್ಚುತ್ತಿರುವ ವಿಶ್ವಯುದ್ಧದ ಭೀತಿ
(૭ ನಗದು ರಹಿತ (Digital) ಪಾವತಿಯ ಪ್ರಯೋಜನಗಳು
(1) ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭಾರತೀಯ ಮಹಿಳೆಯರ ಭಾಗವಹಿಸುವಿಕೆ
૦2. ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಎಚ್ಚರಿಕೆಯಿಂದ ಓದಿ ಕೇಳಿರುವ ಪ್ರಶ್ನೆಗಳಿಗೆ ನೇರ,
ಸರಳ, ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಉತ್ತರಿಸಿ : 12x5=60
ಜೀವಿಸುತ್ತಿರುವ ಸಂತಾನೋತ್ಪತ್ತಿ ಗುಂಪುಗಳಲ್ಲಿ ಜೀವ ವೈವಿಧ್ಯವು ವಿಶ್ವದ
ವೈವಿಧ್ಯತೆಗೆ ಕಾರಣವಾಗಿದೆ. ಇದರಲ್ಲಿ ವಂಶಾವಳಿ ವೈವಿಧ್ಯತೆ ಮತ್ತು ಆಯಾ
ಸಮುದಾಯಗಳು ರೂಪಿಸಿಕೊಳ್ಳುವ ಪರಿಸರವೂ ಸೇರಿದೆ... ಇಂದು ಈ
ಜೀವವೈವಿಧ್ಯತೆಯು. ಗಂಭೀರ ಅಪಾಯಗಳನ್ನು ૦૦૦૪૭૦. ವಿಜ್ಞಾನಿಗಳ
ಅಭಿಪ್ರಾಯದಂತೆ. ಉಷ್ಣವಲಯದ ಅರಣ್ಯನಾಶ ಮತ್ತು ಅದರಿಂದಾಗುತ್ತಿರುವ
ತೊಂದರೆಗಳ ಪ್ರಮಾಣ ಅಂದಾಜು ಒಂದು ದಶಕದಲ್ಲಿ 5 ರಿಂದ 10 ರಷ್ಟಾಗಿದ್ದು
ಉಷ್ಣವಲಯದ ಅರಣ್ಯದಲ್ಲಿ ವಾಸಿಸುವ ಜೀವ ಜಂತುಗಳು ಮುಂದಿನ 25 ವರ್ಷಗಳಲ್ಲಿ
ನಾಶ ಹೊಂದುತ್ತವೆ.
ಈ ವಿನಾಶದ ಬಿಕ್ಕಟ್ಟು ಉಷ್ಣವಲಯದ ಅರಣ್ಯಗಳಿಗಷ್ಟೇ ಸೀಮಿತವಲ್ಲ. ನೀರಿನ
ಮೂಲಗಳನ್ನು ಕೃತಕವಾಗಿ ಸೇರಿಸಿ ನದಿಗಳು ಕೂಡುವಂತೆ ಮಾಡಿ ಹೊಸ ನೀರಿನಲ್ಲಿ
ವಿದೇಶಿ ಜೀವ ಜಂತುಗಳನ್ನು ಪರಿಚಯಿಸಲಾಗುತ್ತಿದೆ. ಸಾಗರದ ದ್ವೀಪಗಳಂತೆ
ಸಾವಿರಾರು ವರ್ಷಗಳಿಂದ ಹಲವು ವಿನಾಶಗಳು ಮತ್ತು ಭಯದ ವಾತಾವರಣ
ಉಂಟಾದರೂ ಪ್ರಾದೇಶಿಕ ವ್ಯವಸ್ಥೆ ಹಾಗೇ ಉಳಿದಿದೆ.
SLPM-C-KND 2
ಜೀವ ಜಂತುಗಳು ಮತ್ತು ಕುಲ ವೈವಿಧ್ಯತೆಯ ನಾಶವು, ಜೀವ ಮೂಲಗಳು
ಮತ್ತು ಪರಿಸರದ ಕುಸಿತವು ಸದ್ಯದ ಮತ್ತು ಮುಂದಿನ ತಲೆಮಾರುಗಳು ಅಗಾಧವಾದ
ಬೆಲೆ ತೆರುವಂತಾಗುತ್ತದೆ. ಇಂದು ಈ ಜೀವ ಜಂತುಗಳನ್ನು ಕಳೆದುಕೊಂಡರೆ,
ಗೊತ್ತಾಗದ ರೀತಿಯಲ್ಲಿ ಆಹಾರ, ವೈದ್ಯಕೀಯದಂತಹ ಉಪಯೋಗಗಳನ್ನು
ಹೆಚ್ಚಿಸುತ್ತದೆ. ಈ ಜೀವ ಪರಿಸರವು ತನ್ನ ಸತ್ವವನ್ನು ಕಳೆದುಕೊಳ್ಳುವುದರಿಂದ
ಮಾನವಕುಲ ಮತ್ತು ಜೀವಸಂಕುಲದ ಕುಸಿತದಿಂದ ಭೂಸವೆತ, ಜಲಾಶಯಗಳ
ಬತ್ತುವಿಕೆ, ಸ್ಥಳೀಯ ಹವಾಮಾನ ಬದಲಾವಣೆ, ಮರುಭೂಮೀಕರಣ ಹಾಗೂ
ಫಲೋತ್ಪತ್ತಿಯ ನಾಶಕ್ಕೆ ಕಾರಣವಾಗುತ್ತದೆ.
ಜೈವಿಕ ಸಂಪನ್ಮೂಲಗಳ ಮಹತ್ವವನ್ನು ದೃಢಪಡಿಸಲು ಮೂರು ಮುಖ್ಯ
ವಿಧಾನಗಳನ್ನು. ಬಳಸಲಾಗುತ್ತದೆ... ಮಿತವ್ಯಯದ ಬಳಕೆ, ಮೌಲ್ಯಮಾಪನ,
ಸಂಪನ್ಮೂಲಗಳ ಮೌಲ್ಯಗಳ ಮಹತ್ವವನ್ನು ತಿಳಿಯುವುದನ್ನು ಒಳಗೊಂಡಿರುತ್ತದೆ.
ಅವುಗಳಲ್ಲಿ ಒಣಸೌದೆ, ಒಣಮೇವು ಮತ್ತು ಮಾಂಸ ಇವುಗಳನ್ನು ನೇರವಾಗಿ
ಮಾರುಕಟ್ಟೆಯ ಅಗತ್ಯವಿಲ್ಲದೆ. ನಾವೇ ಸಂಗ್ರಹಿಸಬಹುದು. ಇವುಗಳ ಫಲದಾಯಕ
ಉಪಯೋಗದ ಮೌಲ್ಯಮಾಪನವು ಉತ್ಪತ್ತಿಗಳ ಮೌಲ್ಯವನ್ನು ಅಳೆಯಲು ಸಹಾಯಕ
ವ್ಯಾವಹಾರಿಕವಾಗಿ ಸಂಗ್ರಹಿಸಿದ ಮರ, ಮೀನು, ಮಾಂಸ, ಜೇನು ಮತ್ತು ಔಷದೀಯ
ಸಸ್ಯಗಳು ಇವೆಲ್ಲವನ್ನು. ಮಾರಲಾಗುವುದು. ಸಂಗ್ರಹಿಸಲಾಗದ ಉಪಯೋಗದ
ಮೌಲ್ಯಮಾಪನವನ್ನು. ಪರಿಸರ ಕಾರ್ಯಗಳನ್ನು ನೇರವಾಗಿ ಅಳತೆಮಾಡಲು
ಸಹಾಯಕವಾಗುತ್ತದೆ. ಉದಾಃ ನೀರಿನ ಮೂಲಗಳ ರಕ್ಷಣೆ, ಸಸ್ಯಗಳ ರಕ್ಷಣೆ,
ಹವಾಮಾನ ನಿಯಂತ್ರಣ ಮತ್ತು ಮಣ್ಣಿನ ಫಲವತ್ತತೆ, ಇವುಗಳೊಂದಿಗೆ ಕೆಲವು ಜೀವ
ಜಂತುಗಳ ಅಸ್ತಿತ್ವವನ್ನು ತಿಳಿಯುವ ಕಾರ್ಯವೂ ನಡೆಯುತ್ತದೆ.
SLPM-C-KND 3
Q3.
ನೀತಿ. ನಿರ್ಮಾಪಕರು ಉತ್ಪಾದಕ ಉಪಯೋಗಗಳ ಮೌಲ್ಯವನ್ನು ಬೃಹತ್
ಕೈಗಾರಿಕೆಗಳಿಂದ ತಯಾರಾಗುವ ವಸ್ತುಗಳೊಂದಿಗೆ ಹೋಲಿಸಿ ಮೆಚ್ಚಿಕೊಳ್ಳುತ್ತಾರೆ.
ಉದಾಃ ಅರಣ್ಯ ಮತ್ತು ಮೀನುಗಾರಿಕೆಗಳು ಮಾರುಕಟ್ಟೆಯೊಂದಿಗೆ
ಸಂಬಂಧಿಸಿರುವುದರಿಂದ ರಾಷ್ಟ್ರೀಯ ಆದಾಯದಲ್ಲಿ ಸಹಾಯಕವಾಗುವುದನ್ನು
ಮೆಚ್ಚುತ್ತಾರೆ.
(a) ಜೀವ ವೈವಿಧ್ಯತೆ ಎಂದರೇನು ?
(1) ಅಳಿಯುವಿಕೆಯ ಬಿಕ್ಕಟ್ಟು ಎಂದರೇನು ?
(૭ ಜೀವ ಜಂತುಗಳು ಮತ್ತು ಕುಲವೈವಿಧ್ಯತೆಗಳ ವಿನಾಶವು ಯಾವ ಆತಂಕಕ್ಕೆ
ಕಾರಣವಾಗುತ್ತವೆ ?
(4) ಬಳಕೆಗೆ ಬಾರದ ಉಪಯೋಗದ ಮೌಲ್ಯಮಾಪನವೆಂದರೇನು ?
(০) ಯಾವ ಮೌಲ್ಯಮಾಪನವು ನೀತಿನಿರ್ಮಾಪಕರ ಮೆಚ್ಚುಗೆಗೆ ಕಾರಣವಾಗಿದೆ ୨
ಏಕೆ?
ಕೆಳಕಂಡ ಪಠ್ಯವನ್ನು ಅದರ ಮೂರನೆಯ ಒಂದು ಭಾಗಕ್ಕೆ ಮೀರದಂತೆ ಸಂಗ್ರಹಿಸಿ
ನಿಮ್ಮದೇ ಆದ ಪದಗಳಲ್ಲಿ ಬರೆಯಿರಿ, ತಲೆ ಬರಹ ಕೊಡುವ ಅಗತ್ಯ ಇಲ್ಲ:
ನಾವು ಸಂತೋಷ ಏನೆಂದು ತಿಳಿದುಕೊಳ್ಳಬೇಕಾದರೆ ಅದನ್ನು ಖಂಡಿತವಾಗಿ
ಪಡೆಯಬೇಕೇ ಹೊರತು. ಕಲ್ಪನಾ ಲೋಕದ ಮೂಲಕ ಅಲ್ಲ. ಸಾವು ಯಾರು
ಮಾನವರಾಗಿ ಶ್ರೀಮಂತ ಮತ್ತು ಪೂರ್ಣ ಜೀವನ ನಡೆಸುತ್ತಿರುತ್ತಾರೋ ಅವರನ್ನು
ನೋಡಿ ತಿಳಿಯಬೇಕು. ನಿಜವಾಗಿ ಸಂತೋಷದಿಂದಿರುವ ವ್ಯಕ್ತಿಯನ್ನು ನೋಡಬೇಕಾದರೆ
ನಾವು. ಆತನ ಕೆಲಸಕಾರ್ಯಗಳನ್ನು ತಿಳಿಯಬೇಕು. - ಆತ ದೋಣಿಯನ್ನು
ನಿರ್ಮಿಸುತ್ತಿರಬಹುದು, ୭୦୦) ಸುಂದರವಾದ ವಾದ್ಯ ಸಂಗೀತವನ್ನು
ನುಡಿಸುತ್ತಿರಬಹುದು, ತನ್ನ. ಮಗನಿಗೆ, ತೋಟದಲ್ಲಿ ಸುಂದರವಾದ ಹೂಗಳನ್ನು
ಬೆಳೆಯುವುದು ಹೇಗೆಂದು ಕಲಿಸುತ್ತಿರಬಹುದು, ಆತ ಸಾಂದರ್ಭಿಕ ಸನ್ನಿವೇಶದಲ್ಲಿ
ಹೊಂದಿರಬಹುದಾದ. ಅಪರೂಪದ ವಸ್ತುವನ್ನು ಪಡೆಯುವಲ್ಲಿ ಸಿಗಬಹುದಾದ
ಸಂತೋಷಕ್ಕಾಗಿ ಹುಡುಕದಿರಬಹುದು. ಆದರೆ ಆತ ಸಂತೋಷದಿಂದಿರಲು ದಿನದ 24
ತಾಸುಗಳ ಕೆಲಸಗಳಲ್ಲಿ ಜಾಗರೂಕನಾಗಿರುತ್ತಾನೆ.
SLPM-C-KND 4
12
12
12
12
12
60
ಯಾವ ವ್ಯಕ್ತಿಯು ತನ್ನ ಕೆಲಸ, ತನಗೊಬ್ಬನಿಗೇ ಸಂಬಂಧಪಟ್ಟ ಮತ್ತು ಅವನ
ಅಗತ್ಯಗಳನ್ನಷ್ಟೇ ಪೂರೈಸುವಂತಹ ಕೆಲಸಗಳಲ್ಲಿ ಸಂತೋಷ ಹುಡುಕುತ್ತಾನೋ ಅವನು
ಅದನ್ನು ಪಡೆಯಲಾರ. ಸಾಮಾನ್ಯವಾಗಿ ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕ
ಸಂಬಂಧಗಳಲ್ಲಿ ತನ್ನನ್ನು ಮಾತ್ರ ಮುಖ್ಯನನ್ನಾಗಿಸಿ ತಕ್ಷಣ ಸಂತೋಷಿಸಲು ಸೀಮಿತ
ಪರಿಧಿಯ ಪರಿಣಾಮಗಳಿಗೆ ಒಳಗಾಗುತ್ತಾನೋ ಆತ ಸಂಪೂರ್ಣ ಸಂತೋಷವನ್ನು
ಹೊಂದಲಾರ. .. ಸಂಪೂರ್ಣ ಸಂತೋಷ ಹೊಂದಬೇಕಾದರೆ. ಹೊರಜಗತ್ತನ್ನು
ತಿಳಿಯಬೇಕು.
ನಿಮಗಾಗಿ ನೀವು ಬದುಕಿದರೆ ಸದಾಕಾಲ ಅಪಾಯದಲ್ಲಿರುತ್ತೀರಿ. ಇದು ನಿಮ್ಮ
ಜೀವನವನ್ನು ಬೇಸರವಾಗುವಂತೆ ಮಾಡುತ್ತದೆ. ವೈಯಕ್ತಿಕತೆಯ ಪುನರಾವರ್ತನೆ,
ವೈಯಕ್ತಿಕ ಭಾವನೆಗಳು ಹಾಗೂ ಆಸಕ್ತಿಗಳು ಜೀವನದಲ್ಲಿ ಬೇಸರ ಮೂಡಿಸಿ
ಸಾವಿನೆಡೆಗೆ ಮುಖಮಾಡುವಂತೆ ಮಾಡುತ್ತವೆ. ನೀವು ಒಂದು ಒಳ್ಳೆಯ ಅವಕಾಶವನ್ನು
ಎಲ್ಲರ ಸಂತೋಷಕ್ಕಾಗಿ ಜೊತೆಗೂಡಿಸಿಕೊಂಡರೆ ಸಂತೋಷ ನಿಮ್ಮದಾಗುತ್ತದೆ.
ವ್ಯಕ್ತಿಯು ಎಲ್ಲಿಯವರೆಗೆ ತನ್ನನ್ನು ಸಮರ್ಪಿಸಿಕೊಂಡು ತನ್ನ ಅಹಂನಿಂದ ಬಿಡುಗಡೆ
ಹೊಂದುವುದಿಲ್ಲವೋ ಅಲ್ಲಿಯವರೆಗೆ ಜೀವನದ ಅರ್ಥವನ್ನು ತಿಳಿಯಲಾಗುವುದಿಲ್ಲ. ತನ್ನ
ಜೊತೆ ಬದುಕುವವರಿಗೆ ಸೇವೆ ಮಾಡುವುದರಿಂದ ಸಂತೋಷ ಸಿಗಲು ಸಾಧ್ಯ. ನೀವು
ನಿಮ್ಮ ಮಹತ್ವಾಕಾಂಕ್ಷೆಯ ಬಗ್ಗೆ ಗರ್ವ ತಾಳಿದರೆ ಅದು. ಹುಚ್ಚನೊಬ್ಬನ ಚೇಷ್ಟೆಗಳ
ಪಟ್ಟಿಯಿಂದ ಕೊನೆಗೊಳ್ಳುತ್ತದೆ. ನಿಮ್ಮನ್ನು ಯಾರು ತಮ್ಮ ಕ್ರಿಯೆಗಳ ಮೂಲಕ ಪಡೆದ
ಅವಕಾಶಗಳಲ್ಲಿ. ಸಂತೋಷವಾಗಿದ್ದಾರೆ.. ಎಂದು... ನೀವು... ಸಂತೋಷವನ್ನು
ಆಯ್ಕೆಮಾಡಿಕೊಳ್ಳಬೇಕಾದರೆ ನಿಮ್ಮ ಪ್ರತಿಷ್ಠೆ ಮತ್ತು ನಿಮ್ಮ ಗರ್ವದ ಇಚ್ಚೆಗಳನ್ನು
ತೊರೆಯಬೇಕಾಗುತ್ತದೆ.
ಯಾರು ಹೆಚ್ಚಿನ ಸಂತೋಷವನ್ನು ಹೆಚ್ಚಿನ ಒಳ್ಳೆಯತನ ಪಡೆಯಬೇಕೆನ್ನುತ್ತಾರೋ
ಅವರು ಬದುಕಿನ ತತ್ವವನ್ನು ರಚನಾತ್ಮಕ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು.
ನಿಜವಾಗಿಯೂ ಸಂತೋಷದಿಂದಿರುವ ಮನುಷ್ಯ ಯಾವಾಗಲೂ ಆಶಾವಾದಿಯಾಗಿ
SLPM-C-KND 5
ಹೋರಾಡುತ್ತಾನೆ. ಆಶಾವಾದವು ನಿಸ್ವಾರ್ಥವನ್ನು ಮಾತ್ರ ಒಳಗೊಳ್ಳುತ್ತದೆ ಜೊತೆಗೆ
ಸಾಮಾಜಿಕ ಜವಾಬ್ದಾರಿಯನ್ನು. ಧೈರ್ಯವನ್ನು ಮತ್ತು ವಸ್ತುನಿಷ್ಠತೆಯನ್ನು
ಒಳಗೊಂಡಿರುತ್ತದೆ. ಈ ವರ್ಗದಲ್ಲಿ ಸೇರುವ ವ್ಯಕ್ತಿಗಳು ಯಾವಾಗಲೂ ಕ್ರಿಯಾಶೀಲರಾಗಿ
ಜೀವನದಲ್ಲಿ ದೃಢತೆ ಮತ್ತು ವಾಸ್ತವತೆಗಳನ್ನು ಹಿರಿಯರಂತೆ ಎದುರಿಸಿ ಕಷ್ಟಗಳನ್ನು
ಧೈರ್ಯದಿಂದ ಎದುರಿಸಿ ತಮ್ಮ ಜೀವನವನ್ನು ಅನುಕಂಪದಿಂದ, ಕರುಣೆಯಿಂದ,
ವಿನೋದಾತ್ಮಕವಾಗಿ ಬದುಕಲು ಪ್ರಯತ್ನಿಸುತ್ತಾರೆ. ಒಟ್ಟಾರೆ ಅವರು ಸಂಪೂರ್ಣ
ಮಾನವತೆಯಿಂದ ಕೂಡಿರುತ್ತಾರೆ. ಒಳ್ಳೆಯ ಜೀವನ ಏನನ್ನು ನಿರೀಕ್ಷಿಸುತ್ತದೆಂದರೆ
ಬದುಕುವ ತತ್ವದ ಜೊತೆಗೆ ಕ್ರಿಯಾತ್ಮಕ ಪರೋಪಕಾರವನ್ನು. ಇದುವೇ ಸಂತೋಷದ
ಜೀವನ ಮತ್ತು ಮನುಷ್ಯನ ಸಂತಸದ ಹಾದಿ.
ಸಂತೋಷದಾಯಕ ಸಾಮಗ್ರಿಗಳು ಬಹಳ ಸರಳ ಅವುಗಳನ್ನು ಒಂದೇ ಕೈಯಲ್ಲಿ
ಗುಣಿಸಬಹುದು. ಸಂತೋಷವು ನಮ್ಮ ಅಂತರಂಗದಿಂದ ಮತ್ತು ಹೆಚ್ಚಿನ ಭದ್ರತೆ ಹಾಗೂ
ಸರಳತೆಯ ಒಳ್ಳೆಯತನ ಮತ್ತು ಶುದ್ಧವಾದ ಆತ್ಮದಿಂದ ಬರುತ್ತದೆ. ಇದಕ್ಕೆ ಧರ್ಮದ
ಅಗತ್ಯವಿಲ್ಲದಿರಬಹುದು. ಆದರೆ. ಯಾರೊಬ್ಬರೂ ಅದನ್ನು ತತ್ವಶಾಸ್ತ್ರ. ಮತ್ತು
ನೀತಿಶಾಸ್ತ್ರಗಳ ಅಗತ್ಯವಿಲ್ಲದೇ ಪಡೆಯಬಹುದು. ಸ್ವಾರ್ಥವೆಂಬುದು ಅದರ ವೈರಿ,
ಬೇರೊಬ್ಬರನ್ನು ಸಂತೋಷ ಪಡಿಸುವುದು ನಮ್ಮ ಸಂತೋಷವೂ ಹೌದು. ಇದು
ಅಪರೂಪವಾಗಿ ದೊರಕುತ್ತದೆ. ದೂರದ ಗುಂಪುಗಳಲ್ಲಿ ಬಹಳ ಸರಳವಾಗಿ ಏಕಾಂಗಿ
ತನದ ಹೆಜ್ಜೆಗಳಲ್ಲಿ ಪ್ರತಿ ಫಲಿಸುತ್ತದೆ. ಇದನ್ನು ಖರೀದಿಸಲಾಗುವುದಿಲ್ಲ, ನಿಜವಾಗಿ
ಇದರಲ್ಲಿ ಹಣದ ಪಾತ್ರ ಅತಿ ಸಣ್ಣದು.
ಯಾರನ್ನೂ ಸಂತೋಷಿ ಎನ್ನಲಾಗದು, ಆತ ನ್ಯಾಯಯುತವಾಗಿ ತನ್ನಷ್ಟಕ್ಕೆ
ತಾನು ಸಂತೋಷದಿಂದಿರಬೇಕಷ್ಟೆ. ಅದು ಅನ್ವೇಷಣೆ, ನಿರಂತರತೆ ಮತ್ತು ತೀರ ಅಗತ್ಯ
ಸಂದರ್ಭಗಳಲ್ಲಿ ಸ್ವಯಂ ಪರೀಕ್ಷೆಯೊಂದಿಗೆ ಆರಂಭವಾಗುತ್ತದೆ. ಮೊದಲು ಬಹಳಷ್ಟಿದ್ದರೂ
ಸ್ವಲ್ಪವಾದರೂ ಕಾರ್ಯಗತಗೊಳ್ಳಬೇಕು. ಈ ಹುಡುಕಾಟ ಸ್ವಯಂ ಮೌಲ್ಯಮಾಪನ
ಅಲ್ಲದೆ ಹೊಸ ಶೋಧಗಳ ಮೇಲೆ ಅವಲಂಬಿತವಾಗಿದ್ದು ಅದರ ಗುಣಾತ್ಮಕ ಅಂಶಗಳು
SLPM-C-KND 6
৫4.
ఎల్ల ಮನುಷ್ಯರನ್ನೂ ಅಸಾಮಾನ್ಯರನ್ನಾಗಿಸುತ್ತದೆ. છઠેઈ ಬೆಳವಣಿಗೆ
ಒಂಟಿಯಾಗಿದ್ದರೂ ಸಂತೋಷವನ್ನು ನೀಡುತ್ತದೆ. ಆದುದರಿಂದ ಯಾರಾದರೊಬ್ಬರು
ಒಂದು. ಯೋಜನೆಯ ರೂಪುರೇಷೆಗಳನ್ನು ಸಂತೋಷಕ್ಕಾಗಿ ಮಾಡಬೇಕು. ಅದು
ಜೀವಂತ ವಿಷಯಗಳ ಜೊತೆ ಸಣ್ಣ ಪರಿಣಾಮ, ಸೌಂದರ್ಯದ ಕೋರಿಕೆ,
ಐಶಾರಾಮಿಗಿಂತ ಭಿನ್ನವಾಗಿರುತ್ತದೆ, ಶೋಕಿಗಿಂತ ಶುದ್ದೀಕರಿಸಲ್ಪಟ್ಟಿರುತ್ತದೆ. ಇದು
ಯೋಗ್ಯವಾಗಿಯೂ, ಪರಿಶ್ರಮದ ಅಭ್ಯಾಸವಾಗಿಯು, ಆಲೋಚನೆ ಶಾಂತವಾಗಿಯೂ,
ಮಾತು ಸಭ್ಯವಾಗಿಯೂ, ಕ್ರಿಯೆ ಧೈರ್ಯವಾಗಿರುವಂತೆ ಮಾಡುತ್ತದೆ. ಅದು ನೇರವಾಗಿ
ನಕ್ಷತ್ರಗಳಿಗೂ, ಪಕ್ಷಿಗಳಿಗೂ, ಸಣ್ಣ ಮಕ್ಕಳಿಗೂ, ಸನ್ಯಾಸಿಗಳಿಗೂ, ಮುಕ್ತ ಹೃದಯದಿಂದ
ಇರುವಂತೆ ವ್ಯವಹರಿಸುತ್ತದೆ. ಎಲ್ಲವನ್ನೂ ಧೈರ್ಯದಿಂದ, ಯಾವುದಕ್ಕೂ ಅವಸರ
ಮಾಡದೆ. ಆಧ್ಯಾತ್ಮಿಕತೆಯಿಂದ ಆಹ್ವಾನಿಸದೆ. ಅಪ್ರಜ್ಞಾವಸ್ಥೆಯಲ್ಲಿ ಎಲ್ಲರೊಂದಿಗೆ
ಸಾಮಾನ್ಯ ಜೀವನದಲ್ಲಿ ಬೆಸೆಯುತ್ತದೆ. ಯಾವುದೇ ಸರ್ಕಾರ ನಿಮಗಾಗಿ ಇದನ್ನು
ಮಾಡುವುದಿಲ್ಲ. ನಿಮಗಾಗಿ ನೀವೇ ಮಾಡಿಕೊಳ್ಳಬೇಕು ಎಂಬುದನ್ನು ಗುರುತಿಸಿಕೊಳ್ಳಿ.
(425 ಪದಗಳು)
ಕೆಳಗಿನ ಗದ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸಿ :
ಪ್ರಪಂಚವಾದ್ಯಂತ ಭಯೋತ್ಪಾದನೆಯು ಮಾನವಕುಲಕ್ಕೆ ದೊಡ್ಡ ಅಪಾಯವನ್ನು
ತಂದೊಡ್ಡಿದೆ. ಅಮೇರಿಕ, ಇಂಡಿಯಾ, ಇಸ್ರೇಲ್ ನಂತಹ ರಾಷ್ಟ್ರಗಳೂ ಕೂಡ
ಭಯೋತ್ಪಾದನೆಯ ಹಿಡಿತದಿಂದ ಪಾರಾಗಲು ಹೋರಾಡುತ್ತಿವೆ. ಆದರೆ ಈ ಕುಣಿಕೆ
ಸತತವಾಗಿ ಬಿಗಿಯುತ್ತಲೇ ಇದೆ. ಪ್ರತಿನಿತ್ಯ ಇಂತಹ ಭಯೋತ್ಪಾದಕ ಕೃತ್ಯಗಳು
ನಡೆಯುತ್ತಿರುವ ವಿಷಯವು ಸುದ್ದಿ ಪತ್ರಿಕೆಗಳ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ
ಪ್ರಕಟವಾಗುತ್ತಿದೆ. ಸುದ್ದಿ ಪತ್ರಿಕೆಗಳು ಪ್ರತಿದಿನವೂ ಇಂತಹ ಭಯಾನಕ ಸುದ್ದಿಗಳಿಂದಲೇ
ಆರಂಭವಾಗುತ್ತವೆ... ಇಂತಹ ಕೃತ್ಯಗಳಿಗೆ. ৩৪৪১ ಜನ. ಅಮಾಯಕರು
ಬಲಿಯಾಗಬೇಕೋ ತಿಳಿಯದಾಗಿದೆ.
SLPM-C-KND 7
20
ಸ್ವಾತಂತ್ರ್ಯಾನಂತರ ৪০৪) ಜನ ಪಾಶ್ಚಾತ್ಯ ರಾಷ್ಟ್ರಗಳ ಶಕ್ತಿಯಿಂದ
ಪ್ರಭಾವಿತರಾಗಿ ಭಯೋತ್ಪಾದನೆಯ ಬೀಜಗಳನ್ನು ಭಾರತದಲ್ಲೂ ಬಿತ್ತುವಂತಾಗಿದೆ.
ಇದರ ಬೇರುಗಳು ದೇಶಾದ್ಯಂತ ಹಟ್ಚುತ್ತಿದ್ದು ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಭಯೋತ್ಪಾದನೆ ಕಾಶ್ಮೀರದಲ್ಲಿ ಕ್ರೂರವಾದ ಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಅಲ್ಲಿನ
ಸ್ಥಳೀಯ ನಿವಾಸಿಗಳು ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಪ್ರತಿನಿತ್ಯ. ಭಯದ
ವಾತಾವರಣದಲ್ಲಿಯೇ ಅವರು ಬದುಕುತ್ತಿದ್ದಾರೆ. ಈ ದಿನ ಏನಾಗುವುದೋ ಎಂಬ
ಭಯದಲ್ಲಿದ್ದಾರೆ. ಇದು ಕೇವಲ ಕಾಶ್ಮೀರ ಮಾತ್ರವಲ್ಲ ಅಸ್ಸಾಂ, ಬೆಂಗಾಲ್, ಮತ್ತು
ನಾಗಾಲ್ಯಾಂಡ್ ಮುಂತಾದ ಕಡೆಗಳಲ್ಲಿಯೂ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಈ
ರಾಜ್ಯಗಳಲ್ಲಿ ಕಾನೂನಿನ ಸುವ್ಯವಸ್ಥೆ ತುಂಬಾ ಸವಾಲಿನದಾಗಿದೆ. ಸೈನ್ಯ ಮತ್ತು
ಪೊಲೀಸ್ ಇಲಾಖೆಗಳು ಇದನ್ನು ಆಯಾ ರಾಜ್ಯಗಳಲ್ಲಿ ನಿಯಂತ್ರಿಸಲು ದಿನವೂ ಕಠಿಣ
ಶ್ರಮಪಡುತ್ತಿವೆ. ಸರ್ಕಾರ ಭಯೋತ್ಪಾದನೆಯನ್ನು ನಿಯಂತ್ರಿಸಲು
ಪರಿಹಾರೋಪಾಯಗಳನ್ನು ಕೈಗೊಳ್ಳುತ್ತಿದೆ. ಆದರೆ. ಸ್ಥಳೀಯ ಸಾಮಾನ್ಯ ಜನರ
ಸಹಕಾರವೂ ಇದಕ್ಕೆ ಅವಶ್ಯಕ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಧಾರ್ಮಿಕ
ಆಸಕ್ತಿಗಳನ್ನು ತ್ಯಜಿಸಲು ಮುಂದಾದರೆ ಪ್ರಾಂತೀಯ ಮನೋಭಾವ ದೂರವಾಗಿ
ಭಾರತೀಯರೆಲ್ಲ ಒಂದೇ ಎಂಬ ಮನೋಭಾವ ಬೆಳೆದರೆ. ಈ ಸಮಸ್ಯೆಯನ್ನು
ಅಂತ್ಯಗೊಳಿಸಬಹುದು. ಯಾವುದೇ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ತೊಂದರೆ
ಕೊಡಬಾರದು. ಭಯೋತ್ಪಾದನೆ ಒಂದು ಮೃಗೀಯ ವರ್ತನೆಯಾಗಿದೆ. ಪ್ರತಿಯೊಬ್ಬರೂ
ಈ ಸಮಸ್ಯೆಯನ್ನು ಕಿತ್ತೊಗೆಯಲು ಸಹಕರಿಸಬೇಕು. ಆಗ ಇಡೀ ವಿಶ್ವವೇ ಏಕವಾಗಿ,
ಸುವ್ಯವಸ್ಥಿತವಾಗಿ ಶಾಂತಿ ಮತ್ತು ಸೌಹಾರ್ದತೆಯನ್ನು ವಿಶ್ವದೆಲ್ಲೆಡೆ ಸ್ಥಾಪಿಸಬಹುದು.
ಆಗ ರಾಷ್ಟ್ರ ಮತ್ತು ಸಮಾಜ ಪ್ರಗತಿಯತ್ತ ಮುನ್ನಡೆಯಲು ಸಾಧ್ಯವಾಗುತ್ತದೆ.
SLPM-C-KND 8
७5.
Q6.
SLPM-C-KND 9
ಕೆಳಗಿನ ಗದ್ಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿ : 20
Healthy children are an essential component of an effective education
system. Good health reduces absenteeism and dropouts and increases
scholastic performance. An effective school health programme is one of the
most cost-effective approaches in improving community health. School health
activities contribute to healthy lifestyles, thus leading to a healthy future
generation. School children also communicate the health-related information
gained in schools to their families and neighbourhood, contributing to
improved family and community health. The functions of school health
services include detection and treatment of defects, creation and
maintenance of hygienic environment in and around the school, provision of
school meals, and improvement of nutritional status of children. This may be
further enlarged to include health check-ups and immunisation campaigns.
(୭) ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ : 2x5=10
ദ ತಾಳಿದವನು ಬಾಳಿಯಾನು 2
Gi) ಬೆಳ್ಳಗಿರುವುದೆಲ್ಲ ಹಾಲಲ್ಲ 2
(11) ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ 2
(૪) ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು 2
(v) ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? 2
യ ಕೆಳಗಿನ ಪದಗಳಿಗೆ ವಿರುದ್ಧಾರ್ಥ ಪದಗಳನ್ನು ಬರೆಯಿರಿ : 25510
6) ಕಷ್ಟ 2
ദ ಸಫಲ 2
68) ಕನಿಷ್ಠ 2
(iv) ದೂರ 2
(v) ಸ್ವದೇಶಿ 2
( ಕೆಳಗಿನ ಪದಗಳನ್ನು ಒಡೆದು ಸಂಧಿರೂಪ ತಿಳಿಸಿ : 2x5=10
0) ಮಳೆಯಿಂದ
Gi) ಗುರುವನ್ನು
68) ಬೆಟ್ಟದಾವರೆ
(iv) ಕಗ್ಗತ್ತಲು
ত ४ ୯୦ ৩৬ ୦୯୦
(v) ಸಂಪನ್ನರಾದ
(d) ವಚನದ ಸಾಲು ಯಾರಿಂದ ರಚನೆಯಾಗಿದೆ : 2x5=10
ઉં) ದಯವಿಲ್ಲದ ಧರ್ಮವಾವುದಯ್ಯಾ? 9
Gi) ಹಗಲನಿರುಳಮಾಡಿ, ಇರುಳಹಗಲಮಾಡಿ
(क) ಉಸುರಿನ ಪರಿಮಳವಿರಲು, ಕುಸುಮದ ಹಂಗೇಕಯ್ಯಾ
(iv) ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
യ ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ
ত ¢ ९७ ১
SLPM-C-KND 10

